Mysore
22
clear sky

Social Media

ಗುರುವಾರ, 19 ಮಾರ್ಚ್ 2026
Light
Dark

ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿದ್ದರೂ ಸಹ ಹಲವರು ತಮ್ಮದೇ ಆದ ಚಿಂತೆಯಲ್ಲಿ ಮುಳುಗಿದ್ದಾರೆ: ಬಿಜೆಪಿ

ಮೈಸೂರು : ವ್ಯಂಗ್ಯಭರಿತವಾಗಿ ಟೀಕೆ ಮಾಡಿರುವ ಬಿಜೆಪಿ ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿದ್ದರೂ ಸಹ ಹಲವರು ತಮ್ಮದೇ ಆದ ಚಿಂತೆಯಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯ ಕಾಂಗ್ರೆಸ್ ನಾಯಕರು ಪ್ರಸ್ತುತ ಈ ಕೆಳಗಿನ ಚಿಂತೆಗಳಲ್ಲಿ ಮುಳುಗಿದ್ದಾರೆ. ಸಿಎಂ ಸಿದ್ದರಾಮಯ್ಯ – ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಚಿಂತೆ, ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಹೇಗೆ ಎಂಬ ಚಿಂತೆ ಎಂದು ವ್ಯಂಗ್ಯವಾಡಿದೆ.

ಪ್ರಿಯಾಂಕ್ ಖರ್ಗೆ – ಸಿದ್ದರಾಮಯ್ಯರವರ ಕೆ.ಇ.ಎ. ಪರೀಕ್ಷಾ ಅಕ್ರಮವನ್ನು ಸಿಬಿಐಗೆ ವಹಿಸಿದರೆ ಏನು ಮಾಡುವುದೆಂಬ ಚಿಂತೆ, ಡಾ.ಪರಮೇಶ್ವರ್ ತಮ್ಮ ಸಿಎಂ ಆಸೆಗೆ ಡಿ.ಕೆ.ಶಿವಕುಮಾರ್ ತಣ್ಣೀರೆರಚಿದರೆ ಏನು ಮಾಡುವುದು ಎಂಬ ಚಿಂತೆ, ಕಾಂಗ್ರೆಸ್ ನಾಯಕರೆಲ್ಲರೂ ತಮ್ಮ ಸ್ವಾರ್ಥದ ರಾಜಕಾರಣದ ಬಗ್ಗೆ ಚಿಂತಿಸುತ್ತಿದ್ದಾರೆ ಹೊರತು ಯಾರಿಗೂ ರಾಜ್ಯದ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆರೋಪ ಮಾಡಿದೆ.

ಮತ್ತೊಂದು ಟ್ವೀಟ್‍ನಲ್ಲಿ 508 ಕೋಟಿಯ ಭರ್ಜರಿ ಲಂಚ ಪಡೆದು ಕಾಂಗ್ರೆಸ್ ಆಡಳಿತದ ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಎಷ್ಟು ಕಳುಹಿಸಲಾಗಿತ್ತು ಎಂಬುದನ್ನೂ ಕಾಂಗ್ರೆಸ್ ಉತ್ತರಿಸಬೇಕು ಎಂದು ಒತ್ತಾಯಿಸಿದೆ.

ತೆಲಂಗಾಣದಲ್ಲೂ ಚುನಾವಣೆ ಘೋಷಣೆಯ ಬಳಿಕ ಡಿ.ಕೆ.ಶಿವಕುಮಾರ್ ಆಪ್ತರ ಮನೆಯಲ್ಲೂ ಸೇರಿ ಈಗಾಗಲೇ 40 ಕೋಟಿಗೂ ಅಕ ಜಪ್ತಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳ ಬಳಿ ಬಚ್ಚಿಟ್ಟಿದ್ದ ನೂರು ಕೋಟಿಗೂ ಅಧಿಕ, ಜತೆಗೆ ಪಂಚರಾಜ್ಯಗಳಿಗೆ ಕಾಂಗ್ರೆಸ್ ಇನ್ನೆಷ್ಟು ಕಳಿಸಿದೆ ಎಂಬುದನ್ನು ಸಿಎಂ ಮತ್ತು ಮುಖ್ಯಮಂತ್ರಿಯಾಗುವ ಅಭಿಲಾಷೆಯಲ್ಲಿರುವ ಎಲ್ಲರೂ ಮೊದಲು ಉತ್ತರಿಸಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸವಾಲು ಹಾಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!