Mysore
23
broken clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಇಪಿಎಫ್‌ ವಂಚನೆ ಪ್ರಕರಣ: ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪಗೆ ಬಿಗ್‌ ರಿಲೀಫ್‌ ನೀಡಿದ ಹೈಕೋರ್ಟ್‌

ಬೆಂಗಳೂರು: ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ವಿರುದ್ಧದ ಇಪಿಎಫ್‌ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್‌ಗೆ ಹೈಕೋರ್ಟ್‌ ತಡೆ ನೀಡಿದ್ದು, ಬಿಗ್‌ ರಿಲೀಫ್‌ ನೀಡಿದೆ.

ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಪಾಲುದಾರನಾಗಿದ್ದ ಕಂಪನಿಯಲ್ಲಿ ಉದ್ಯೋಗಿಗಳಿಗೆ ಇಪಿಎಫ್‌ ಹಣ ಪಾವತಿ ಮಾಡದೆ ವಂಚಿಸಲಾಗಿದೆ ಎಂಬ ಆರೋಪದ ಮೇಲೆ ಬಂಧನ ವಾರೆಂಟ್‌ ಜಾರಿಯಾಗಿತ್ತು. ಈ ಆರೋಪ ವಿಚಾರವಾಗಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಹೊರಡಿಸಿರುವ ರಿಕವರಿ ನೋಟಿಸ್‌ ಹಾಗೂ ಬಂಧನ ವಾರೆಂಟ್‌ ಪ್ರಶ್ನಿಸಿ ಉತ್ತಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ರಜಾಕಾಲದ ನ್ಯಾಯಪೀಠವೂ ನ್ಯಾಯಪೀಠವೂ ಬಂಧನ ವಾರೆಂಟ್‌ ಅನ್ನು ತಡೆ ಹಿಡಿಯಲಾಗಿದೆ ಎಂದು ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ರಾಬಿನ್‌ ಉತ್ತಪ್ಪ ಮೆಸಸ್‌ ಸೆಂಚುರಿಸ್‌ ಲೈಫ್‌-ಸ್ಟೈಲ್‌ ಬ್ರ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪಡೆನಿಗೆ ಪಾಲುದಾರರಾಗಿದ್ದರು. ಈ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನೇಕ ಉದ್ಯೋಗಿಗಳಿಗೆ ಇಪಿಎಫ್‌ ಹಣ ಪಾವತಿಸಿರಲಿಲ್ಲ. ವೇತನದಲ್ಲಿ ಸುಮಾರು 23 ಲಕ್ಷ ರೂ.ಗಳಷ್ಟು ಇಪಿಎಫ್‌ ಹಣ ಕಡಿತಗೊಳಿಸಿಕೊಂಡು , ಉದ್ಯೋಗಿಗಳ ಖಾತೆಗೆ ಹಾಕದೇ ವಂಚಿಸಿರುವ ಆರೋಪ ಕೇಳಿ ಬಂದಿತ್ತು.

 

 

Tags:
error: Content is protected !!