ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ೯ ವರ್ಷದ ರೀಟಾ ಎಂಬ ಹೆಣ್ಣಾನೆ ಗಂಡು ಮರಿಯಾನೆಗೆ ಜನ್ಮ ನೀಡಿದ್ದು, ಇಡೀ ಉದ್ಯಾನವನದಲ್ಲಿ ಸಂತೋಷ ಮನೆ ಮಾಡಿದೆ. ಸಫಾರಿಯ ಸೀಗೆಕಟ್ಟೆಯಲ್ಲಿ ಈ ಮರಿಯಾನೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದು, ಇದೇ ಮೊದಲ ಬಾರಿಗೆ ಮರಿಯಾನೆಗೆ ರೀಟಾ ಜನ್ಮ ನೀಡಿದ್ದಾಳೆ.
ಇನ್ನು ಪಶು ವೈದ್ಯರು ಹಾಗೂ ಸಿಬ್ಬಂದಿಯ ಆರೈಕೆಯಲ್ಲಿ ತಾಯಿ ಆನೆ ಹಾಗೂ ಮರಿ ಆನೆ ಆರೋಗ್ಯವಾಗಿದ್ದು, ಮರಿಯಾನೆ ಜನನದ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ ೨೭ಕ್ಕೆ ಏರಿಕೆಯಾಗಿದೆ. ಇನ್ನು ಈ ೨೭ ಆನೆಗಳ ಪೈಕಿ ೧೨ ಗಂಡು ಆನೆಗಳು ಇದ್ದರೆ, ೧೫ ಹೆಣ್ಣಾನೆಗಳು ಇವೆ. ಇನ್ನು ಉದ್ಯಾನವನಕ್ಕೆ ಬರುವ ಪ್ರವಾಸಿಗರು ಈ ಮರಿಯಾನೆಯನ್ನ ನೋಡಿ ಖುಷಿ ಪಡುತ್ತಿದ್ದಾರೆ.




