Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಹಾಸನ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ನೋಟಿಸ್‌ ಜಾರಿ !

ಹಾಸನ : ಹಾಸನ ಡಿಸಿ ಹಾಗೂ ಚುನಾವಣಾ ಅಧಿಕಾರಿಯಾಗಿರುವ ಸಿ. ಸತ್ಯಭಾಮಾ ಅವರ ಕಾರ್ಯನಿರ್ವಹಣಾ ಬಗ್ಗೆ ಮಾಜಿ ಪ್ರಧಾನಿ HD ದೇವೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದೀಗ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಲಾಗಿದೆ.

ಹಾಸನ ಡಿಸಿ ಜಿಲ್ಲಾ ಚುನಾವಣಾ ಅಧಿಕಾರಿ ಸಿ ಸತ್ಯಭಾಮಾಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದೂರು ಆಧರಿಸಿ ಇದೀಗ ಡಿಸಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಡಿಸಿ ಕಾರ್ಯನಿರ್ವಹಣಾ ಬಗ್ಗೆ ಎಚ್ ಡಿ ದೇವೇಗೌಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿ ವರದಿ ನೀಡಲು ಸೂಚನೆ ನೀಡಲಾಗಿದೆ. ಗಂಭೀರ ಸ್ವರೂಪದ ಆರೋಪ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ದೂರು ಆಧರಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಸಿಇಸಿ, ಕೇಂದ್ರ ಸರಕಾರ ಚುನಾವಣಾ ಆಯೋಗದ ಪತ್ರ ಆಧರಿಸಿ ಮಾರ್ಚ್ 21ರಂದು ನೋಟಿಸ್ ಜಾರಿ ಮಾಡಲಾಗಿದೆ.

ನೋಟಿಸ್ ತಲುಪಿದೆ 24 ಗಂಟೆಯೊಳಗೆ ಸೂಚನೆ ನೀಡಲಾಗಿದೆ ಡಿಸಿ ಬರ್ತಾನೆ ಬಗ್ಗೆ ಇಡೀ ಜೆಡಿಎಸ್ ನಾಯಕರು ಗಂಭೀರವಾದ ಆರೋಪ ಮಾಡಿದ್ದರು ಸ್ಥಳೀಯ ನಾಯಕರ ಮಾಹಿತಿಯನ್ನು ಆಧರಿಸಿ ಎಚ್ ಡಿ ದೇವೇಗೌಡ ದೂರು ನೀಡಿದ್ದರು ಎನ್ನಲಾಗಿದೆ

Tags:
error: Content is protected !!