Mysore
33
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಇರಾನ್‌-ಇಸ್ರೇಲ್‌ ಯುದ್ಧದ ಎಫೆಕ್ಟ್:‌ ದುಬಾರಿಯಾಗಲಿದೆ ಡ್ರೈಫ್ರೂಟ್ಸ್‌

ಬೆಂಗಳೂರು: ಇರಾನ್-ಇಸ್ರೇಲ್‌ ನಡುವಿನ ಯುದ್ಧದಿಂದಾಗಿ ಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರ ಎಫೆಕ್ಟ್‌ ರಾಜ್ಯದ ಮೇಲೂ ತಟ್ಟಿದ್ದು, ಡ್ರೈಫ್ರೂಟ್ಸ್‌ ಮಾರಾಟದ ಮೇಲೆ ನೇರ ಪರಿಣಾಮ ಬೀರುತ್ತಿದೆ.

ರಂಜಾನ್‌ ಮುಸ್ಲಿ ಬಾಂಧವರ ಪವಿತ್ರವಾದ ಹಬ್ಬ. ಈ ಸಮಯದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ರೋಜಾ ಮಾಡಿ ನಂತರ ಆಹಾರ ಸೇವಿಸುತ್ತಾರೆ. ಈಗಾಗಲೇ ರಂಜಾನ್‌ ಮಾಸದ ಉಪವಾಸ ವ್ರತ ಆರಂಭವಾದ ಹಿನ್ನೆಲೆ ನಗರದ ಮಾರುಕಟ್ಟೆಗಳಲ್ಲಿ ಡ್ರೈಫ್ರೂಟ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ.

ಆದರೆ ವಾರ್‌ನ ಹಿನ್ನೆಲೆಯಲ್ಲಿ ಕೊಂಚ ಆತಂಕ ಎದುರಾಗಿದೆ. ಇರಾನ್‌-ಇಸ್ರೇಲ್‌ನಿಂದ ಬರುತ್ತಿದ್ದ ಡ್ರೈಫ್ರೂಟ್ಸ್‌ಗಳು ಬಂದ್‌ ಆಗಿದ್ದು, ಮಾಲೀಕರಿಗೆ ದೊಡ್ಡ ಹೊಡೆತ ಬಿದ್ದಿದೆ.

Tags:
error: Content is protected !!