Mysore
30
scattered clouds

Social Media

ಶನಿವಾರ, 02 ನವೆಂಬರ್ 2024
Light
Dark

ಇಡಿ ಸಂಸ್ಥೆ ಒಂದು ಸಂಘಟನೆಯ ನಿಯಂತ್ರಣದಲ್ಲಿದೆ: ಬಿ.ಕೆ.ಹರಿಪ್ರಸಾದ್ ಆರೋಪ

ಚಿತ್ರದುರ್ಗ: ಮುಡಾ ಪ್ರಕರಣದಲ್ಲಿ ಮುಡಾ ಕಚೇರಿಯ ಮೇಲೆ ದಾಳಿ ನಡೆಸಿದ ಇಡಿ ಸಂಸ್ಥೆಯೂ ಒಂದು ಸಂಘಟನೆಯ ನಿಯಂತ್ರಣದಲ್ಲಿದೆ. ಅದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದ್ದಾರೆ.

ಈ ಬಗ್ಗೆ ಚಿತ್ರದುರ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ನಾನು ಸಾಫ್ಟ್‌ ಮತ್ತು ಹಾರ್ಡ್‌ ಅಲ್ಲ. ವಿಚಾರಗಳ ಆಧಾರದ ಮೇಲೆ ಮಾತನಾಡುತ್ತಿದ್ದೇವೆ ಅಷ್ಟೇ. ಬಿಜೆಪಿ ಅವರು ವಿನಾಃಕಾರಣ ಕಾಂಗ್ರೆಸ್‌ ಸರ್ಕಾರದ ಮೇಲೆ ಇಡಿ, ಸಿಬಿಐ ಹಾಗೂ ಐಟಿ ಮೂಲಕ ರಾಜಕೀಯ ಮಾಡುತ್ತಾರೆ. ಆ ಸಂದರ್ಭದಲ್ಲಿ ನಾನು ಮಾತನಾಡುತ್ತೇನೆ. ಇದರ ಅರ್ಥ ನಾನು ಸಾಫ್ಟ್‌ ಅಂತ ಅಲ್ಲ. ಅದರ ಬದಲು ನಾನು ಕೋಮುವಾದಿಗಳ ವಿರುದ್ಧ ನಾನು ಹಾರ್ಡ್‌ ಆಗಿರುತ್ತೇನೆ ಎಂದರು.

ಇನ್ನು ಮುಡಾ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾದಲ್ಲಿ ಇಡಿ ಅಧಿಕಾರಿಗಳು ರೇಡ್‌ ಮಾಡಿದ್ದಾರೆ. ಆ ವೇಳೆ ಎರಡು ಬ್ಯಾಗ್‌ಗಳಲ್ಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿತ್ತು. ಆದರೆ, ವಾಸ್ತವವಾಗಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಎರಡು ಬ್ಯಾಗ್‌ಗಳಷ್ಟು ಇರುವುದಿಲ್ಲ. ಇಡಿ ಅಧಿಕಾರಿಗಳು ಆ ಬ್ಯಾಗ್‌ನಲ್ಲಿ ನ್ಯೂಸ್‌ ಪೇಪರ್‌ಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಅಷ್ಟೇ ಎಂದು ಟೀಕೆ ಮಾಡಿದ್ದಾರೆ.

ಬಳಿಕ, ಇಡಿ ಅಧಿಕಾರಿಗಳು ನಿಜವಾಗಿಯೂ ರಾಜಕೀಯ ಲಾಭ ಪಡೆಯಲು ಎರಡೂ ಬ್ಯಾಗ್‌ಗಳನ್ನು ಪ್ರರ್ದಶಿಸಿದ್ದಾರೆ. ಅಲ್ಲದೇ, ಈ ಸಂಸ್ಥೆಯ ಅಧಿಕಾರಿಗಳು ಒಂದು ಸಂಘಟನೆಯ ಹಿಡಿತದಲ್ಲಿದ್ದಾರೆ. ಅದನ್ನು ನಾನು ಸಮಯ ಬಂದಾಗ ತಿಳಿಸುತ್ತೇನೆ. ಅಲ್ಲದೇ, ಬಿಜೆಪಿ ಅವರು 25 ವರ್ಷ ಹಳೆಯದಾದ ಮುಡಾ ಪ್ರಕರಣದ ಬಗ್ಗೆ ರಾಜಕೀಯ ದ್ವೇಷ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

 

 

 

 

Tags: