Mysore
33
overcast clouds

Social Media

ಬುಧವಾರ, 06 ಮೇ 2026
Light
Dark

ಬೆಂಗಳೂರಿನಲ್ಲಿ 10 ಕೋಟಿ ರೂ ಮೌಲ್ಯದ ಡ್ರಗ್ಸ್‌ ಜಪ್ತಿ: ವಿದೇಶಿ ಮಹಿಳೆ ಬಂಧನ

arrested

ಬೆಂಗಳೂರು: ಬರೋಬ್ಬರಿ 10 ಕೋಟಿ ರೂ ಮೌಲ್ಯದ ಡ್ರಗ್ಸ್‌ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದು, ಓರ್ವ ವಿದೇಶಿ ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆ ನಗರದಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ಆಗಿದ್ದಳು ಎಂದು ತಿಳಿದುಬಂದಿದೆ.

ಮೂರು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ ಮಹಿಳೆ ಆರಂಭದಲ್ಲಿ ನವದೆಹಲಿಯಲ್ಲಿ ವಾಸವಾಗಿದ್ದಳು. ಬಳಿಕ ತೆಲಂಗಾಣ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುವುದಾಗಿ ಹೇಳಿ ಎಜುಕೇಷನ್‌ ವೀಸಾ ಪಡೆದಿದ್ದಳು.

ಬಳಿಕ ಕಾಲೇಜಿಗೆ ದಾಖಲಾಗದೇ ಡ್ರಗ್ಸ್‌ ಪೆಡ್ಲಿಂಗ್‌ಗೆ ಇಳಿದಿದ್ದಳು. ಇತ್ತೀಚೆಗೆ ಬೆಂಗಳೂರಿಗೆ ಬಂದು ನೆಲೆಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!