ಮೈಸೂರು: ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಬಳಿ ಭವಾನಿ ರೇವಣ್ಣ ಅವರ ಕಾರು ಅಪಘಾತವಾದ ಘಟನೆ ನಡೆದಿತ್ತು.
ಈ ವೇಳೆ ಕೋಪಗೊಂಡ ಭವಾನಿ ಅವರು ಕಾರಿಗೆ ಗುದ್ದಿದ್ದ ಬೈಕ್ ಸವಾರನಿಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.
ಅಪಘಾತದವಾದ ಸ್ಥಳದಲ್ಲಿ ಕಾರು ತಮ್ಮದೇ ಎಂದು ಭವಾನಿ ಹೇಳಿಕೊಂಡಿದ್ದರು. ಕಾರು ವಿಚಾರಕ್ಕೆ ಸಂಬಂಧಿಸಿದಂತೆ ಈಗ ಒಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಇದರ ಬಗ್ಗೆ ಮಾಹಿತಿ ಕಲೆಹಾಕಿದಾ ಬಳಿಕ, ಈ ಕಾರು ಇನ್ಫ ಇಂಜಿನಿಯರಿಂಗ್ ಕಂಪನಿಯ ಹೆಸರಿನಲ್ಲಿರುವುದು ತಿಳಿದು ಬಂದಿದೆ. ಈ ಕಂಪನಿಯ ನಿರ್ದೇಶಕ ಅಭಿಜಿತ್ ಅಶೋಕ್ ಬಿಬಿಎಂಪಿ ಕ್ಲಾಸ್ ಒನ್ ಕಂಟ್ರ್ಯಾಕ್ಟರ್ ಎಂದು ತಿಳಿದು ಬಂದಿದೆ.
ಸದ್ಯ ಈ ಕಾರಿನ ಸುತ್ತ ಅನುಮಾನಗಳ ಹುತ್ತ ಹುಟ್ಟಿಕೊಂಡಿದ್ಕಾದು, ಕಾರು ಯಾರದೆಂದು ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದಾರೆ.