Mysore
25
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಗ್ರಾಮ ಮಟ್ಟದಲ್ಲಿ ಜಾತಿಗಣತಿ ಅಪ್‌ಡೇಟ್‌ ಮಾಡಬೇಕು: ಮಾಜಿ ಸಂಸದ ಡಿ.ಕೆ.ಸುರೇಶ್‌ ಆಗ್ರಹ

dk suresh opinion on caste census

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಗ್ಗೆ ಇರುವ ಗೊಂದಲ ನಿವಾರಿಸಬೇಕು ಎಂದು ಮಾಜಿ ಸಂಸದ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಆಗ್ರಹಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯಬೇಕು. ಎಲ್ಲರಿಗೂ ನ್ಯಾಯ ಒದಗಿಸಬೇಕು. ಹೀಗಾಗಿ ಮೊದಲು ಗೊಂದಲಗಳನ್ನು ನಿವಾರಣೆ ಮಾಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:- ಮರು ಜಾತಿಗಣತಿ ಅನಗತ್ಯ ; ಎಂಎಲ್‌ಸಿ ಯತೀಂದ್ರ

ಜಾತಿಗಣತಿ ಬಗ್ಗೆ ಎಲ್ಲಾ ಸಚಿವರು ಹಾಗೂ ಶಾಸಕರ ಅನುಮಾನ ಬಗೆಹರಿಸಬೇಕು. ಗ್ರಾಮ ಮಟ್ಟದಲ್ಲಿ ಜಾತಿಗಣತಿ ಅಪ್‌ಡೇ ಮಾಡಲು ಅವಕಾಶ ನೀಡಬೇಕು. ಕುರುಬರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋರಿಸಿದ್ದಾರೆಂಬ ಅನುಮಾನ ಕೆಲವರಿಗಿದೆ. ಆ ಅನುಮಾನವನ್ನು ಸಿದ್ದರಾಮಯ್ಯ ಮುಂದೆ ನಿಂತು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:- ಜಾತಿ ಜನಗಣತಿ|ಪ್ರತಾಪ್ ಸಿಂಹಗೆ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಟಾಂಗ್

Tags:
error: Content is protected !!