ರಾಮನಗರ : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜೀನಾಮೆ ಬಳಿಕ ಚನ್ನಪಟ್ಟಣ ವಿಧಾನಸಭೆಗೆ ಉಪಚುನಾವಣೆ ನಡೆಯಲಿದೆ. ಈಗಾಗಿ ಈ ಕ್ಷೇತ್ರವನ್ನ ಹೇಗಾದ್ರೂ ಮಾಡಿ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಅಂತ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಅಲ್ಲದೆ ಈ ಚುನಾವಣೆಯನ್ನ ಫುಲ್ ಸೀರಿಯಸ್ ಆಗಿ ಡಿಕೆ ಶಿವಕುಮಾರ್ ತೆಗೆದುಕೊಂಡಂತೆ ಕಾಣುತ್ತಿದ್ದು, ಮತ್ತೆ ಚನ್ನಪಟ್ಟಣ ಪ್ರವಾಸವನ್ನು ಮುಂದುವರೆಸಿದ್ದಾರೆ. ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಮೂರು ಬಾರಿ ಕಾರ್ಯಕ್ರಮಗಳನ್ನ ನಡೆಸಿ ಯಶ್ವಸಿಗೊಳಿಸಿದ್ದಾರೆ. ಹೀಗಿದ್ದರೂ ಸಹ ಜುಲೈ ೧ ರಿಂದ ಮತ್ತೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ.
ಜುಲೈ 1 ರಂದು ಭೂಹಳ್ಳಿ, ವಿರಾಪಿಕ್ಷಿಪುರ ಗ್ರಾಮಕ್ಕೆ ಭೇಟಿ ಮತ್ತು ಜುಲೈ-2 ರಂದು ಮಳೂರು, ಹೊಂಗನೂರಿಗೆ ಭೇಟಿ ನೀಡಲಿದ್ದಾರೆ. ಅಲ್ಲದೆ ಜುಲೈ-3ರಂದು ಚನ್ನಪಟ್ಟಣ ಟೌನ್ ನಲ್ಲಿ ಎರಡು ಕಡೆ ಕಾರ್ಯಕ್ರಮ ಬಳಿಕ ಜನಸ್ಪಂದನ ಸಭೆ ಕೂಡ ನಡೆಸಲಿದ್ದಾರೆ