ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೊಟ್ಟೆ ಎಸೆತ ಪ್ರಕರಣದಲ್ಲಿ ಬಿಜೆಪಿಯವರು ಬಾಯಿ ಬಂದ ಹಾಗೇ ಮಾತನಾಡಿ, ಡ್ರಾಮಾ ಕಂಪೆನಿ ರೀತಿ ವರ್ತಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡುರಾವ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಇಂದು(ಡಿಸೆಂಬರ್.26) ಸರ್ಕಾರದ ವಿರುದ್ಧ ಶಾಸಕ ಮುನಿರತ್ನ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಆರೋಪ ಮಾಡುತ್ತಿರುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕೆಲವೊಂದು ಘಟನೆಗಳು ಸಂಭವಿಸಿದೆ. ಅದಕ್ಕೆ ಈಗಾಗಲೇ ಪೊಲೀಸರು ಸಂಬಂಧಿತ ಆರೋಪಿಗಳನ್ನು ಆರೆಸ್ಟ್ ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷ ನಾಟಕ ಕಂಪೆನಿ ರೀತಿಯಲ್ಲಿ ವರ್ತಿಸಿ, ಬಾಯಿಗೆ ಬಂದ ಹಾಗೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರಿಗೂ ಸಹ ಹಿಂಸಾತ್ಮಕವಾಗಿ ತೊಂದರೆಯನ್ನು ನೀಡಬಾರದು, ಆದರೆ ಈ ವಿಚಾರದಲ್ಲಿ ಹಾಗೇ ಆಗಿದೆ. ಅದಕ್ಕೆ ಸರ್ಕಾರದ ವಿರುದ್ಧ ಈ ರೀತಿ
ಕಪ್ಪೋಕಲ್ಪಿತ ಮಾತುಗಳನ್ನು ಸೇರಿಸಿ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನನ್ನ ಪ್ರಕಾರ ಶಾಸಕ ಮುನಿರತ್ನ ವಿಚಾರದಲ್ಲಿ ಈ ಘಟನೆ ಉಪ್ಪು ತಿಂದವರು, ನೀರು ಕುಡಿಯಬೇಕು ಎನ್ನುವ ಪರಿಸ್ಥಿತಿ ಎದುರಾದಂತೆ ಕಾಣುತ್ತಿದೆ. ಆದರೆ ಮುನಿರತ್ನ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಕುಸುಮಾ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಇನ್ನು ಈ ಮೂವರ ಬಗ್ಗೆ ಮುನಿರತ್ನ ಹೇಳಿಕೆಗಳನ್ನು ನೀಡಿರುವುದು ತಪ್ಪು. ಸಾರ್ವಜನಿಕರಿಗೆ ಈ ಬಗ್ಗೆ ನಿಜಾಂಶ ತಿಳಿದಿದೆ ಎಂದು ಹೇಳಿದ್ದಾರೆ.




