ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಸೋಂಕು ಉಲ್ಬಣಗೊಳ್ಳುತ್ತಿದೆ ಹೊರತು ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅದರಲ್ಲೂ ಈ ಡೆಂಗ್ಯೂ ಮಕ್ಕಳನ್ನ ಬಲಿ ಪಡೆದುಕೊಳ್ಳುತ್ತಿರುವುದು ದೊಡ್ಡ ಆತಂಕವನ್ನುಂಟು ಮಾಡುತ್ತಿದೆ.
ಹಾಸನದಲ್ಲಿ ಈ ಡೆಂಗ್ಯೂಗೆ ನಾಲ್ಕು ಮಕ್ಕಳು ಸಾವನ್ನಪ್ಪಿದ್ದರು. ಇದೀಗ ಬೆಂಗಳೂರಿನಲ್ಲಿ ಡೆಂಗ್ಯೂನಿಂದ ೧೧ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಅಂಜನಾಪುರದ ೧೧ ವರ್ಷದ ಗಗನ್ ಎಂಬ ಬಾಲಕ ಕಳೆದ ಕೆಲ ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ಆದರೆ ನಿನ್ನೆ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.