Mysore
27
scattered clouds
Light
Dark

ಚನ್ನಪಟ್ಟಣ ಅಭ್ಯರ್ಥಿ ನಾನೇ ಎಂದು ಪುನರುಚ್ಛರಿಸಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ ಘೋಷಣೆಗೂ ಮುನ್ನ ಚುನಾವಣೆ ಕದನ ಕೂತುಹಲ ನಿರೀಕ್ಷೆಗಳನ್ನು ಮೀರಿಸಿದ್ದು, ದಿನದಿಂದ ದಿನಕ್ಕೆ ಚುನಾವಣ ಕಣ ರಂಗೇರುತ್ತಿದೆ.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂದು ಮತ್ತೊಮ್ಮೆ ಹೇಳಿದರು.

ಮುಂದುವರೆದು ಬಿ ಫಾರ್ಮ್‌ ಕೊಡೋನು ನಾನೇ, ಅದರ ಮೇಲೆ ಸಹಿ ಮಾಡೋನು ನಾನೆ ಮತ್ತು ಸ್ಪರ್ಧೇಗಿಳಿಯುವವನು ಸಹ ನಾನೇ, ಇದನ್ನ ಆನ್‌ ರೆಕಾರ್ಡ್‌ ಹೇಳುತ್ತಿದ್ದೇನೆ ಎಂದು ಹೇಳಿದರು.