ಬೆಳಗಾವಿ: ಮಾಜಿ ಶಾಸಕ ಫೀರೋಜ್ ಸೇಠ್ ಅವರ ನಿವಾಸಕ್ಕೆ ತೆರಳಿ ಗಾಂಧಿ ಸಮಾವೇಶಕ್ಕೆ ಆಹ್ವಾನಿಸಲಾಯಿತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿರುವ ಫಿರೋಜ್ ಸೇಠ್ ನಿವಾಸಕ್ಕೆ ಇಂದು(ಜನವರಿ.19) ತೆರಳಿದ್ದು, ಜನವರಿ.21ರಂದು ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಆಹ್ವಾನಿಸಲಾಯಿತು. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸಿ, ಉಪಾಹಾರ ಸೇವಿಸಲಾಯಿತು ಎಂಬ ಮಾಹಿತಿ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಪೀರೋಜ್ ಅವರು, ಅನೇಕ ದಶಕಗಳಿಂದಲೂ ಕಾಂಗ್ರೆಸ್‌ನೊಂದಿಗೆ ನಮ್ಮ ಕುಟುಂಬ ಗುರುತಿಸಿಕೊಂಡಿದೆ. ಇನ್ನೂ ಎರಡು ಅವಧಿಗೆ ಶಾಸಕನಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಅಲ್ಲದೇ ಪಕ್ಷದ ಬೆಳವಣಿಗೆಗೆ ನಿರಂತರ ದುಡಿದ್ದೇನೆ. ಹೀಗಾಗಿ ಡಿ.ಕೆ.ಶಿವಕುಮಾರ್ ಇಂದು ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದಾರೆ ಅಷ್ಟೇ. ಅದಕ್ಕೆ ಇನ್ಯಾವುದೇ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ.