Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್‌ ಫಿಕ್ಸ್‌

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆಯಲಿರುವ ಕರಗ ಮಹೋತ್ಸವಕ್ಕೆ ಡೇಟ್‌ ಫಿಕ್ಸ್‌ ಆಗಿದ್ದು, ಏಪ್ರಿಲ್.‌4ರಿಂದ 14ರವರೆಗೆ ನಡೆಯಲಿದೆ.

ಇನ್ನು ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರೇ ಕರಗವನ್ನು ಹೊರಲಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಬೆಂಗಳೂರು ಕರಗವನ್ನು ಜ್ಞಾನೇಂದ್ರ ಹೊರುತ್ತಿದ್ದಾರೆ.

ಈ ಬಾರ ಜ್ಞಾನೇಂದ್ರ ಅವರು ಕರಗ ಹೊತ್ತರೇ 15ನೇ ಬಾರಿ ಕರಗ ಹೊತ್ತಂತೆ ಆಗುತ್ತದೆ. ಜನವರಿ.27ರಂದು ರಾತ್ರಿ ನಡೆದ ಸಭೆಯಲ್ಲಿ ಜ್ಞಾನೇಂದ್ರ ಸ್ವಾಮಿಯನ್ನು ಮತ್ತೆ ಕರಗ ಹೊರಲು ಆಯ್ಕೆ ಮಾಡಲಾಗಿದೆ.

ಇನ್ನು ಸತತ 15ನೇ ಬಾರಿ ಕರಗ ಹೊರುತ್ತಿರುವ ಕರಗದ ಪೂಜಾರಿ ಜ್ಞಾನೇಂದ್ರರಿಗೆ ಇದು ಕೊನೆಯ ಕರಗ ಶಕ್ತ್ಯೋತ್ಸವ ಆಗಿದೆ.

 

Tags:
error: Content is protected !!