Mysore
27
scattered clouds

Social Media

ಶನಿವಾರ, 24 ಜನವರಿ 2026
Light
Dark

ನ.11ಕ್ಕೆ ಆರ್.ಎಸ್.ಎಸ್ ವಿರುದ್ಧ ʼದಸಂಸ ಪ್ರತಿರೋಧ ಸಮಾವೇಶʼ

ಮೈಸೂರು : ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ನ.11 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆರ್.ಎಸ್.ಎಸ್ ವಿರುದ್ಧ ಡಿ.ಎಸ್.ಎಸ್ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶತಮಾನೋತ್ಸವದ ಉನ್ಮಾದದ ಅಮಲಿನಲ್ಲಿ ತೇಲುತ್ತಿರುವ ಸನಾತನಿಗಳು ಸಂವಿಧಾನ-ಪ್ರಜಾಪ್ರಭುತ್ವ ಹಾಗೂ ಅಂಬೇಡ್ಕರ್‌ ಅವರ ವ್ಯಕ್ತಿ-ವ್ಯಕ್ತಿತ್ವದ ಮೇಲೆ ಒಮ್ಮೆಲೆ ತೀವ್ರ ದಾಳಿಗೆ ಮುಂದಾಗಿದ್ದಾರೆ. ಮುಸ್ಲಿಮರು, ದಲಿತರು, ಕ್ರೈಸ್ತರು ನಂತರದಲ್ಲಿ ಹಿಂದುಳಿದ ಶೂದ್ರ ಸಮುದಾಯಗಳು ಇವರ ಮುಂದಿನ ಗುರಿಯಾಗಿವೆ.

ಇದನ್ನು ಓದಿ: ಮಂಡ್ಯ | ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ; ಭೂಸ್ವಾಧೀನಕ್ಕೆ ಎಚ್‌ಡಿಕೆ ಸೂಚನೆ

ಒಟ್ಟಾರೆ, ಆರೆಸ್ಸೆಸ್-ಬಿಜೆಪಿಗಳಿಗೆ ಮತ್ತೆ ‘ಮನುಸ್ಮೃತಿ’ ಜಾರಿಗೆ ಬರಬೇಕಿದೆ. ಚಾತುರ್ವರ್ಣ ಪದ್ಧತಿಯಂತೆ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳು ಇವರ ಜೀತದಾಳುಗಳಾಗಬೇಕಿದೆ. ಈ ಕಾರಣಕ್ಕಾಗಿಯೇ, ಆರೆಸ್ಸೆಸ್ ಹೇಳಿದಂತೆ ಕೇಳುವ ರಾಜಕಾರಣಿಗಳು ಇವರಿಗೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತಿ ಧರ್ಮದ ವಿರುದ್ಧ ಕಲಹ ಸೃಷ್ಟಿಸಿ ಬೆಂಕಿ ಹೆಚ್ಚುತ್ತಿರುವ ಹಾಗೂ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಕಂಟಕಪ್ರಾಯವಾಗಿ ಬ್ರಾಹ್ಮಣ್ಯದ ಪಾರಮ್ಯವನ್ನು ಮೆರೆಸಲು ಮುಂದಾಗಿರುವ ಆರ್ ಎಸ್ ಎಸ್ ಹಾಗೂ ಬಿಜೆಪಿಯ ಕುತಂತ್ರವನ್ನು ಹಿಮ್ಮಟ್ಟಿಸುವುದು ಮತ್ತು ಸಂವಿಧಾನದ ರಕ್ಷಣೆಗೆ ಒಗ್ಗಟ್ಟಾಗುವುದು ಸಮಾವೇಶದ ಉದ್ದೇಶವಾಗಿದೆ. ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ದಸಂಸ ಹಿರಿಯ ಮುಖಂಡರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಎನ್.ವೆಂಕಟೇಶ್, ಇಂದೂಧರ ಹೊನ್ನಾಪುರ, ಎನ್.ಮುನಿಸ್ವಾಮಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Tags:
error: Content is protected !!