Mysore
27
scattered clouds
Light
Dark

ಬಳ್ಳಾರಿ ಜೈಲಿಗೆ ದರ್ಶನ್‌: ಸಂಚಾರ ಮಾರ್ಗ ವಿವರ ಹೀಗಿದೆ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್‌ ಹಾಗೂ ಸಹಚರರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಇಂದು(ಆ.28) ರಾತ್ರೋರಾತ್ರಿ ಸ್ಥಳಾಂತರ ಮಾಡಲಾಗುತ್ತಿದೆ.

ʻಡಿʼ ಗ್ಯಾಂಗ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡುತ್ತಿರುವುದು ಮೊನ್ನೆಯಷ್ಟೆ ಬಯಲಾಗಿತ್ತು. ಇದರಿಂದ ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಕಾರಗೃಹ ಮತ್ತು ಸುಧಾರಣೆ ಇಲಾಖೆ ಅಧಿಕಾರಿಗಳು,  ದರ್ಶನ್‌ರನ್ನು ನ್ಯಾಯಾಲಯದ ಆದೇಶದಂತೆ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗುತ್ತಿದೆ.

ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಸಿಕ್ಕ ಪ್ರಕರಣದ ಬಗ್ಗೆ ಎಫ್‌ಐಆರ್‌ ಕೂಡ ದಾಖಲಾಗಿದ್ದು, ಪ್ರಕರಣ ಕುರಿತಾಗಿ ಇಂದು (ಆ.28) ದರ್ಶನ್‌ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ವಿಚಾರಣೆ ಹಾಗೂ ಸ್ಥಳ ಮಹಜರು ಸಹ ಮಾಡಲಾಗಿದೆ.

ಇನ್ನೂ ಇಂದು ಬೆಳಿಗ್ಗೆ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವ ಸುದ್ದಿ ಹಬ್ಬಿತ್ತು, ಆದರೆ ಕಾರಣಾಂತರಗಳಿಂದ ನಾಳೆಗೆ(ಆ.29)ಕ್ಕೆ ಮುಂದೂಡಿತ್ತು. ಇದೀಗ, ರಾತ್ರೋರಾತ್ರಿಯೇ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶೀಫ್ಟ್‌ ಮಾಡಲಾಗುತ್ತಿದೆ.

ದರ್ಶನ್‌ ಅವರನ್ನು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ನಾಳೆ ಬೆಂಗಳೂರು, ತುಮಕೂರು, ಹಿರಿಯೂರು, ಚಳ್ಳಕೆರೆ, ರಾಯದುರ್ಗ ಮಾರ್ಗವಾಗಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಾಳಾಂತರ ಮಾಡಲಾಗುತ್ತಿದೆ.

ದರ್ಶನ್‌ ಬಳ್ಳಾರಿ ಜೈಲಿಗೆ ಬರುತ್ತಾರೆಂದು ಅವರ ಅಭಿಮಾನಿಗಳು ಜೈಲಿನ ಮುಂದೆ ಕಾದು ನಿಂತಿದ್ದರು. ಆದರೆ, ದರ್ಶನ್‌  ಬರಲಿಲ್ಲ ಎಂದು ತಿಳಿದ ತಕ್ಷಣ ನಿರಾಸೆಗೊಂಡು ವಾಪಸ್‌ ತೆರಳಿದ್ದರು.