ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಚುರುಕುಗೊಳಿಸಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಡಿಕೆಶಿ ಅವರು ಇಂದು ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದರು.
ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ವಿಚಾರಣೆ ಸಂಜೆ 4.30 ರವರೆಗೂ ನಡೆಯಿತು. ತನಿಖೆಗೆ ಸಹಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ವಿಚಾರಣೆಗೆ ಹಾಜರಾಗೋಕೆ ಹೇಳಿದ್ದ ಪರಿಣಾಮ ಇಂದು ನಾನೇ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದ್ದೇನೆ. ಮತ್ತೆ ಕೆಲ ದಾಖಲೆಗಳೊಂದಿಗೆ ಬರಲು ಹೇಳಿದ್ದಾರೆ. ಯಾವ ದಿನ ಬರಬೇಕು ಎಂದು ಹೇಳಿಲ್ಲ ಎಂದರು.
ಇನ್ನು ಇವರಿಗಿಂತ ಸಿಬಿಐನವರೇ ಪರವಾಗಿಲ್ಲ. ಒಂದು ದಿನಾನೂ ಕರೆದಿಲ್ಲ. ಏನನ್ನೂ ಹೇಳಿಲ್ಲ. ಇವರು ನೋಡಿದ್ರೆ ಆಗಲೇ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ. ಯಾವೆಲ್ಲಾ ದಾಖಲೆಗಳು ಕೇಳಿದ್ದಾರೆ ಅನ್ನೋದನ್ನು ಹೇಳೋಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.