Mysore
26
overcast clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಹೆಚ್‌ಡಿಕೆ ಭೆಟಿಯಾದ ಸಿ.ಟಿ.ರವಿ- ಸಂದರ್ಭ ಎದುರಾದರೆ ಮಂಡ್ಯ ಸಂಸದರನ್ನು ಭೇಟಿ ಮಾಡುತ್ತೇನೆ: ಹೆಚ್‌ಡಿಕೆ

ರಾಮನಗರ: ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಅವರು ಇಂದು ಜೆಡಿಎಸ್‌ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

ಕುಮಾರಸ್ವಾಮಿ ಅವರ ರಾಮನಗರದ ತೋಟದ ಮನೆಗೆ ಆಗಮಿಸಿದ ಸಿ.ಟಿ.ರವಿ ಅವರನ್ನು ಹೆಚ್‌ಡಿಕೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ತೋಡದ ಆವರಣದಲ್ಲೀ ಕೂತು ಮಾತು ಕತೆ ನಡೆಸಿದರು.

ಭೇಟಿ ಬಳಿಕ ಮಾತನಾಡಿದ ಹೆಚ್‌.ಡಿ. ಕುಮಾರಸ್ವಾಮಿ ಅವರು, ಲೋಕಸಭಾ ಚುನಾವಣೆ ಬಗ್ಗೆ ಅಥವ ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ.

ಮುಂಬರುವ ದಿನಗಳಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಜಂಟಿಯಾಗಿ ಕೆಲಸ ಮಾಡಬೇಕಾಗಿದೆ. ಆ ಉದ್ದೇಶದಿಂದ ಇದೊಂದು ಸಹಜವಾದ ಭೇಟಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.ಸಂಸದೆಸುಮಲತಾರನ್ನು ಭೇಟಿ ಮಾಡುತ್ತೇನೆ: ಸಿ.ಟಿರವಿ ಭೇಟಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮುಂಬರುವ ದಿನಗಳಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಎರಡು ಪಕ್ಷದವರು ಸೌಹಾರ್ದತೆಯಿಂದ ಕೆಲಸ ಮಾಡಬೇಕು. ಹೀಗಾಗಿ ಇದೊಂದು ಸಾದಾರಣ ಭೇಟಿಯಾಗಿದೆ. ಸುಮಲತಾ ಅವರನ್ನು ಭೇಟಿಯಾಗುತ್ತೇನೆ. ಸಂದರ್ಭ ಎದುರಾದರೆ, ಒಂದು ವೇಳೆ ಬಿಜೆಪಿಗೆ ಅವರ ಬೆಂಬಲ ಮುಂದುವರೆಸಿದರೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!