Mysore
36
few clouds

Social Media

ಬುಧವಾರ, 22 ಏಪ್ರಿಲ 2026
Light
Dark

ಸಿಟಿ ರವಿ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಯತ್ನಾಳ್‌ ಆಗ್ರಹ

ವಿಜಯಪುರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಎಂ.ಎಲ್‌.ಸಿ ಸಿಟಿ ರವಿ ಸದನದಲ್ಲಿ ಅಶ್ಲೀಲ ಪದ ಬಳಕೆಗೆ ಸಂಬಂಧಿಸಿದಂತೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಈ ಪ್ರಕರಣ ಸಂಬಂಧ ಸಿಐಡಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

ಇಂದು (ಡಿ.25) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಸಿಐಡಿಯು ರಾಜ್ಯ ಸರ್ಕಾರದ ಪರವಾಗಿ ಕೆಲಸ ಮಾಡುತ್ತದೆ. ಏಕೆಂದರೆ ಅದರ ಮೇಲೆ ಒತ್ತಡಿವಿದೆ. ಆದ ಕಾರಣ ನಮಗೆ ಅದರ ಮೇಲೆ ವಿಶ್ವಾಸವಿಲ್ಲ ಅಂದು ಆರೋಪಿಸಿದರು.

ಸಿಟಿ ರವಿ ಅವರ ಮೇಲೆ ಎನ್‌ಕೌಟರ್‌ ಪ್ಲ್ಯಾನ್‌ ಕೂಡ ಮಾಡಲಾಗಿತ್ತು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ಕಾಂಗ್ರೆಸ್‌ ಶತಮಾನೋತ್ಸವಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ್‌, ಇದು ನಕಲಿಯರು ಸೇರಿಕೊಂಡು ಮಾಡುತ್ತಿರುವ ಕಾಂಗ್ರೆಸ್‌ ಅಧಿವೇಶನ. ಗಾಂಧಿ ಹೆಸರು ಇಟ್ಟುಕೊಂಡು ಅಧಿವೇಶನ ಮಾಡುವ ಕಾರಣಕ್ಕೆ ಕಾರ್ಯಕ್ರಮಕ್ಕೆ ಪಾವಿತ್ರ್ಯತೆ ಬರುವುದಿಲ್ಲ. ಕಾಂಗ್ರೆಸ್‌ನವರು ಗಾಂಧೀಜಿಯವರನ್ನು ಮಾತ್ರ ಸ್ಮರಣೆ ಮಾಡುತ್ತಾರೆ. ಆದರೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸ್ಮರಣೆ ಮಾಡುವುದಿಲ್ಲ ಎಂದರು.

ಸನಾತನ ಧರ್ಮ ಉಳಿದರೆ ಮಾತ್ರ ಭಾರತದ ಸಂವಿಧಾನ ಉಳಿಯುವುದು ಎಂದು ಹೇಳಿದರು.

Tags:
error: Content is protected !!