Mysore
27
scattered clouds

Social Media

ಮಂಗಳವಾರ, 16 ಜೂನ್ 2026
Light
Dark

ರಾಜ್ಯಕ್ಕೆ ಮುಂಗಾರು ಎಂಟ್ರಿಗೆ ಕ್ಷಣಗಣನೆ, ರೈತರಲ್ಲಿ ಮಂದಹಾಸ

ಮೈಸೂರು : ನೈಋತ್ಯ ಮುಂಗಾರು ಜೂನ್ 4 ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಾರು ಆರಂಭದ ಬೆನ್ನಲ್ಲೇ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಂದಿನ 6 ರಿಂದ 7 ದಿನಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಕೇರಳ ತಲುಪಬೇಕಿದ್ದ ಮುಂಗಾರು ಈ ಬಾರಿ ಸಣ್ಣ ಬದಲಾವಣೆಗಳನ್ನು ಕಂಡಿದೆ. ಹವಾಮಾನ ಇಲಾಖೆಯು ಮುಂಗಾರು ಮಾರುತಗಳ ಅಧಿಕೃತ ಆಗಮನವನ್ನು ಘೋಷಿಸಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತದೆ.

ಸದ್ಯ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ದಟ್ಟವಾದ ಮೋಡಗಳು ಕವಿದಿದ್ದರೂ, ಅರಬ್ಬಿ ಸಮುದ್ರದ ಮೇಲೆ ಬೀಸಬೇಕಾದ ಪಶ್ಚಿಮ ಮಾರುತಗಳ ವೇಗ ಇನ್ನು ಅಗತ್ಯ ಮಟ್ಟವನ್ನು ತಲುಪಿಲ್ಲ. ಈ ತಾಂತ್ರಿಕ ಕಾರಣಗಳಿಂದಾಗಿ ಆರಂಭದ ದಿನಾಂಕವನ್ನು ಮೇ 26 ರಿಂದ ಜೂನ್ 4 ಕ್ಕೆ ಪರಿಷ್ಕರಿಸಲಾಗಿದ್ದರೂ, ಜೂನ್ 8 ರೊಳಗಿನ ಆಗಮನವನ್ನು ಹವಾಮಾನ ತಜ್ಞರು ‘ಸಾಮಾನ್ಯ ಅವಧಿ’ ಎಂದೇ ಪರಿಗಣಿಸುತ್ತಾರೆ.

ಮುಂಗಾರು ಪ್ರವೇಶದ ಪ್ರಭಾವದಿಂದಾಗಿ ಕೇರಳದ ಹಲವು ಜಿಲ್ಲೆಗಳಿಗೆ ಈಗಾಗಲೇ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಜೂನ್ 7 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು.

Tags:
error: Content is protected !!