ಬೆಂಗಳೂರು: ನಗರದಲ್ಲಿ ಮಳೆ ಆರ್ಭಟ ದ್ವಿಗುಣಗೊಂಡಿದ್ದು, ನಿರಂತರ ಮಳೆಯಿಂದಾಗಿ ದೊಡ್ಡ ದೊಡ್ಡ ಅವಾಂತರಗಳು ಸೃಷ್ಟಿಯಾಗುತ್ತಿವೆ.
ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮನೆ, ಕಟ್ಟಡ ಸೇರಿದಂತೆ ಬೃಹತ್ ಅಪಾರ್ಟ್‌ಮೆಂಟ್‌ಗಳು, ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಭಾರಿಗೆ ಮಳೆ ಹೆಬ್ಬಾಳದ ಡಾಲರ್ಸ್ ಕಾಲೋನಿಯ ರೈಲ್ವೆ ಅಂಡರ್‌ಪಾಸ್, ಪ್ರೆಸ್ಟೀಜ್ ಅಪಾರ್ಟ್‌ಮೆಂಟ್, ಸಿ.ಐ.ಎಲ್ ಬಡವಾಣೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆ ನೀರು ನಿಂತು ಕೆರೆಗಳೇ ಸೃಷ್ಟಿಯಾಗಿದೆ. ಇನ್ನುಳಿದಂತೆ ಎ.ಜಿ ರೋಡ್, ರೇಸ್ ಕೋರ್ಸ್, ಮಲ್ಲೇಶ್ವರಂ, ಯಶವಂತಪುರ, ಬಾಣಸವಾಡಿ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗಿದೆ.
ಬುಧವಾರ ಸಂಜೆ ಸುರಿದ ಧಾರಾಕಾರ ಮಳೆ ರಾಮಕೃಷ್ಣನಗರ, ಫಯಾಜಾಬಾದ್ ಹಾಗೂ ಹಲಚೇನಹಳ್ಳಿಯಲ್ಲಿ ಸುಮಾರು 100 ಮನೆಗಳು ಜಲಾವೃತವಾಗಿವೆ. ಜೊತೆಗೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಕಾರುಗಳು ಜಖಂಗೊಂಡಿವೆ.