Mysore
27
overcast clouds

Social Media

ಶನಿವಾರ, 18 ಜುಲೈ 2026
Light
Dark

ರಾಜ್ಯದ ಅಹಿತಕರ ಘಟನೆಗೆ ಕಾಂಗ್ರೆಸ್‌ ಸರ್ಕಾರದ ಧೋರಣೆಗಳೇ ಕಾರಣ: ಪ್ರಧಾನಿ

ಬೆಂಗಳೂರು: ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಚೇಗೆ ನಡೆದ ಕೆಲವು ಪ್ರಕರಣಗಳನ್ನು ತಳಕು ಹಾಕಿ, ಕಾಂಗ್ರೆಸ್‌ ಸರ್ಕಾರದ ನೀತಿ ಅತ್ಯಂತ ಅಪಾಯಕಾರಿಗಳಾಗಿವೆ ಎಂದರು.

ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗುತ್ತಿವೆ. ಜನವಸತಿ ಪ್ರದೇಶದಲ್ಲಿ ಬಾಂಬ್‌ ಇಡಲಾಗುತ್ತಿದೆ. ಭಜನೆ, ಕೀರ್ತನೆ ಮಾಡುವವರ ಮೇಲೆ ದಾಳಿಗಳಾಗುತ್ತಿವೆ. ಈ ಎಲ್ಲದಕ್ಕೂ ಕಾಂಗ್ರೆಸ್‌ನ ಧೋರಣೆಗಳೇ ಕಾರಣ ಎಂದು ಆರೋಪ ಮಾಡಿದರು.

ನಡೆಯುತ್ತಿರುವುದು ಸಾಮಾನ್ಯ ಘಟನೆಗಳಲ್ಲ. ಬೆಂಗಳೂರು ಹಾಗೂ ಕರ್ನಾಟಕದ ಸಹೋದರು ಕಾಂಗ್ರೆಸ್‌ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದರು.

Tags:
error: Content is protected !!