Mysore
25
scattered clouds

Social Media

ಬುಧವಾರ, 15 ಜನವರಿ 2025
Light
Dark

ಅತ್ಯಾಚಾರ ಆರೋಪ: ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ದೂರು ದಾಖಲು

ಬೆಂಗಳೂರು: ಸಂತ್ರಸ್ಥ ಮಹಿಳೆ ದೂರಿನ ಆಧಾರದ ಮೇಲೆ ಧಾರವಾಡದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಸಂಜಯ್‌ ನಗರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ(ಅಕ್ಟೋಬರ್‌ 8) ಎಫ್‌ಐಆರ್‌ ದಾಖಲಿಸಲಾಗಿದೆ.

ಸಂತ್ರಸ್ಥ ಮಹಿಳೆಯು ತನ್ನ ಮೇಲೆ ಅತ್ಯಾಚಾರ ಎಸಗಿ ಕಿರುಕುಳ ನೀಡಿದ್ದಾರೆಂದು ದೂರು ದಾಖಲಿಸಿದ್ದರು. ಬಳಿಕ ಈ ದೂರಿನ ಆಧಾರದ ಮೇಲೆ ಶಾಸಕ ವಿನಯ್‌ ಕುಲಕರ್ಣಿ ಅವರನ್ನು ಎ1 ಆರೋಪಿ ಮತ್ತು ಅವರ ಆಪ್ತ ಸಹಾಯಕ ಅರ್ಜುನ್‌ ಅವರನ್ನು ಎ2 ಆರೋಪಿ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ನಮೂದಿಸಿದ್ದಾರೆ.

ಸಂತ್ರಸ್ಥ ಮಹಿಳೆಯೂ ದೂರಿನಲ್ಲಿ 2022ರಲ್ಲಿ ನಾನು ಶಾಸಕರನ್ನು ಭೇಟಿ ಮಾಡಿದ್ದೆ. ಆ ವೇಳೆ ಶಾಸಕರು ನನ್ನ ಫೋನ್‌ ನಂಬರ್‌ ಅನ್ನು ಒಬ್ಬ ರೈತರಿಣದ ಪಡೆದಿದ್ದರು. ಬಳಿಕ ನನಗೆ ಶಾಸಕರು ರಾತ್ರಿ ಸಮಯದಲ್ಲಿ ಕರೆ ಮಾಡಲು ಆರಂಭಿಸಿದರು. ಹೀಗೆ ನಡೆಯುತ್ತಿರುವಾಗ ಕೆಲವು ತಿಂಗಳ ಆದಮೇಲೆ ಬೆತ್ತಲೆಯಾಗಿ ವೀಡಿಯೋ ಕರೆ ಮಾಡುವಂತೆ ಹೇಳುತ್ತಿದ್ದರು. ಅಲ್ಲದೇ, ಹೆಬ್ಬಾಳದಲ್ಲಿರುವ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ್ದರು. ನಾನು ಇದನ್ನು ನಿರಾಕರಿಸಿದಕ್ಕೆ ಕೆಲ ರೌಡಿಗಳ ತಂಡವೊಂದು ಶಾಸಕರ ಮನೆಗೆ ಹೋಗದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂದು ಬೆದರಿಕೆ ಹಾಕಿದ್ದರು.

ಇದಾದಮೇಲೆ ಏಪ್ರಿಲ್‌ನಲ್ಲಿ ಶಾಸಕರು ನನ್ನನ್ನು ಬೆಳಗಾವಿಗೆ ಬರುವಂತೆ ಹೇಳಿದರು. ನಾನು ಅಲ್ಲಿಗೆ ಹೋದಾಗ ನನಗೆ ಮುಜುಗರವಾಗುವಂತೆ ಮಾಡಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಶಾಸಕರನ್ನು ಭೇಟಿಯಾಗಲು ಬಂದಾಗ ನಾನು ಅವರಿಂದ ತಪ್ಪಿಸಿಕೊಂಡು ಬಂದೆನು. ಆಗಸ್ಟ್‌ 24 ರಂದು ಒಂದು ಕೆಲಸದ ಅನಿವಾರ್ಯವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದೆ. ಆ ವೇಳೆ ಶಾಸಕರು ನನಗೆ ಕರೆ ಮಾಡಿ ಹೆಬ್ಬಾಳದ ಮನೆಗೆ ಬರುವಂತೆ ಆದೇಶಿಸಿದ್ದರು. ಆಗ ನಾನು ಅಲ್ಲಿಗೆ ಹೋಗುವ ಸನ್ನಿವೇಶ ಎದುರಾಯಿತು. ಶಾಸಕರು ಆ ಸಂದರ್ಭದಲ್ಲಿ ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣದ ಹತ್ತಿರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನನ್ನ ಮೇಲೆ ಕಾರಿನಲ್ಲಿಯೇ ಅತ್ಯಾಚಾರ ನಡೆಸಿ, ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತೇನೆ ಎಂದು ಆಮಿಷವೊಡ್ಡಿದರು ಎಂದು ದಾಖಲಿಸಿದ್ದಾರೆ.

Tags: