Mysore
21
clear sky

Social Media

ಬುಧವಾರ, 28 ಜನವರಿ 2026
Light
Dark

ಅಪ್ಪು ಅಗಲಿಕೆಯ 3ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಪೂಜೆ

ಬೆಂಗಳೂರು: ನಗುವಿನ ಒಡೆಯ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಗೆ ಮೂರು ವರ್ಷ. ಇಂದು(ಅ.29) ಪುನೀತ್‌ ಅವರ ಪತ್ನಿ ಅಶ್ವಿನ್‌ ಪುನೀರ್‌ ರಾಜ್‌ಕುಮಾರ್‌ ಕುಟುಂಬದೊಂದಿಗೆ ಇಲ್ಲಿ ಕಂಠೀರವ ಸ್ಟುಡಿಯೋದರಲ್ಲಿರುವ ಪುನೀತ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ಪುನೀತ್ ಮಗಳು ವಂದಿತಾ, ನಟ ರಾಘವೇಂದ್ರ ರಾಜ್‌ ಕುಮಾರ್‌ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. ಈ ವೇಳೆ ಅಪ್ಪು ಅಭಿಮಾನಿಗಳು ಸಹ ನಮನ ಸಲ್ಲಿಸಿದರು.

ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಹಾಗೂ ವಂದಿತಾ ಅವರು ಪುನೀತ್‌ ನೆಚ್ಚಿನ ತಿಂಡಿ, ಸಿಹಿ ತಿನಿಸುಗಳನ್ನು ಎಡೆ ಇಟ್ಟರು. ಮೂರು ವರ್ಷ ಕಳೆದರು ಪುನೀತ್‌ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಸಹ ಸಾವಿರಾರು ಅಭಿಮಾನಿಗಳು ಸಾಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

ಪುನೀತ್‌ ನೆನಪು ಮಾಸಲ್ಲ. ದುಃಖ ಇನ್ನೂ ಇದೆ. ಜನಗಳ ಪ್ರೀತಿ ಕಮ್ಮಿ ಆಗುತ್ತಲೇ ಇಲ್ಲ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್‌ ಗುಣವನ್ನು ನಿಮ್ಮಲ್ಲೂ ಮುಂದುವರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ರಾಘವೇಂದ್ರ ರಾಜ್‌ ಕುಮಾರ್‌ ಹೇಳಿದರು.

2021ರ ಅ.29ರಂದು ಪುನೀತ್‌ ಅವರು ಅಕಾಲಿಕ ನಿಧನರಾಗಿದ್ದರು.

Tags:
error: Content is protected !!