ಬೆಂಗಳೂರು: ಈ ರಾಜ್ಯದಲ್ಲಿ ಆರ್‌ಎಸ್‌ಎಸ್ ಅವರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಹೆದರುವುದಲ್ಲ. ಅವರಿಂದ ಏನೇ ಆದರೂ ಅದನ್ನು ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು(ಮಾರ್ಚ್.17) ಈ ಕುರಿತು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಬಿಜೆಪಿಯೂ ಆರ್‌ಎಸ್‌ಎಸ್ ಹೇಳಿದಂತೆ ಮಾಡುತ್ತದೆ. ಹಾಗಾಗಿ ನಮ್ಮ ಸರ್ಕಾರವೂ ಆರ್‌ಎಸ್‌ಎಸ್‌ನವರಿಗೆ ಹೆದರುವುದಿಲ್ಲ. ಅವರಿಂದ ಈ ರಾಜ್ಯದಲ್ಲಿ ಏನೇ ಆದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1942ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರೇ ಆರ್‌ಎಸ್‌ಎಸ್‌ನವರು. ಹೀಗಾಗಿಯೇ ಬಿಜೆಪಿಗರು, ದಲಿತರು ಮತ್ತು ಹಿಂದುಳಿದವರ ಏಳಿಗೆ ಸಹಿಸುತ್ತಿಲ್ಲ. ಅಲ್ಲದೇ ದಲಿತರು ದಲಿತರ ಕಾಲೋನಿಯಲ್ಲೇ ಇರಬೇಕು ಎಂ ದುರುದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.





