Mysore
27
scattered clouds

Social Media

ಬುಧವಾರ, 15 ಜನವರಿ 2025
Light
Dark

ಭಾರತ್ ಅಕ್ಕಿ ಬಂದ್ ವಿಚಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು : ಚುನಾವಣೆಗೋಸ್ಕರ ಭಾರತ್‌ ಅಕ್ಕಿಯನ್ನ ಕೊಟ್ಟಿದ್ರು. ಈಗ ಲೋಕಸಭೆ ಚುನಾವಣೆ ಮುಗಿದೆ. ಅದಕ್ಕಾಗಿ ಅಕ್ಕಿ ಕೊಡುವುದನ್ನ ಈಗ ಬಂದ್‌ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದೇವು. ಆದರೆ ಆ ಸಂರ್ಭದಲ್ಲಿ ಕೇಂದ್ರ ಸರ್ಕಾರ ದುರುದ್ದೇಶದಿಂದ ನಮಗೆ ಅಕ್ಕಿ ಕೊಡಲಿಲ್ಲ.  ಕಾರ್ಪೋರೇಷನ್‌ ದರದಲ್ಲೆ ಕೊಡುತ್ತೇವೆ ಅಂದರು ಕೊಡಲಿಲ್ಲ ಈ ಭಾರತ್‌ ಅಕ್ಕಿ ಬಂದ್‌ ಮಾಡಿದ್ದಾರೆ. ಲೋಕಸಭೆ ಚುನಾವಣೆಗಾಗಿ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಈಗ ಚುನಾವಣೆ ಮುಕ್ತಾಯಗೊಂಡಿದೆ. ಅದಕ್ಕಾಗಿ ಯೋಜನೆ ಬಂದ್‌ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Tags: