Mysore
21
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಬೆಳಗಾವಿ: ವೀರಸೌಧದಲ್ಲಿ ಗಾಂಧೀಜಿ ಪ್ರತಿಮೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ʼಗಾಂಧಿ ಭಾರತʼ ರಾಷ್ಟ್ರೀಯ ಕಾಂಗ್ರೆಸ್‌ ಶತಮಾನೋತ್ಸ ಅಧಿವೇಶನದ
ಅಂಗವಾಗಿ ವೀರಸೌಧದಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಸಿಎಂ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು(ಡಿ.26) ಮತ್ತು ನಾಳೆ(ಡಿ.25) ರಾಷ್ಟ್ರೀಯ ಕಾಂಗ್ರೆಸ್‌ ಶತಮಾನೋತ್ಸವ ಅಂಗವಾಗಿ ಗಾಂಧಿ ಭಾರತ ಅಧಿವೇಶನದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಮಹಾತ್ಮ ಗಾಂಧೀಜಿ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ.

ಈ ವೇಳೆ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಎಐಸಿಸಿ ಸಭೆ ನಡೆಸಿದ್ದ ಸ್ಥಳದ ಸಭಾಂಗಣದಲ್ಲಿ ಫೋಟೋ ಗ್ಯಾಲರಿಯನ್ನು ಹಾಗೂ ನೂಲುವ ಮೂಲಕ ಚರಕ ಚಕ್ರವನ್ನು ಉದ್ಘಾಟಿಸಿ, ನಂತರ ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಹಾಗೂ ಮಾರಾಟ ಮೇಳವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

Tags:
error: Content is protected !!