Mysore
22
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಕೆಆರ್​ಎಸ್ ಜಲಾಶಯಕ್ಕೆ ಭೇಟಿ ನೀಡಿದ ಕೇಂದ್ರ ಸಂಸದೀಯ ಸ್ಥಾಯಿ ಸಮಿತಿ

ಮಂಡ್ಯ: ಕೆಆರ್​ಎಸ್ (ಕೃಷ್ಣರಾಜ ಸಾಗರ​) ಜಲಾಶಯದ ಸ್ಥಿತಿಗತಿಯ ಬಗೆಗಿನ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸದೀಯ ಸಮಿತಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯಕ್ಕೆ ಭೇಟಿ ನೀಡಿದ್ದಾರೆ.

ಕೇಂದ್ರ ಜಲಸಂಪನ್ಮೂಲ ಸ್ಥಾಯಿ ಸಮಿತಿ ಅಧ್ಯಕ್ಷ, ಸಂಸದ ಪರ್ಬಾತ್ ಭಾಯ್ ಸವಾಬಾಯಿ ಪಟೇಲ್ ನೇತೃತ್ವದ ತಂಡ ಇಂದು ಕೆಆರ್‌ಎಸ್‌ ಜಲಾಶಕ್ಕೆ ಭೇಟಿ ನೀಡಿ, ಕಾವೇರಿ ತಾಯಿಗೆಪೂಜೆ ಸಲ್ಲಿಸಿದ ನಂತರ ಕೆಆರ್​ಎಸ್ ಡ್ಯಾಂ ವೀಕ್ಷಣೆ ಮಾಡಿದ್ದಾರೆ. ಸಂಸದೀಯ ಸಮಿತಿ ಭೇಟಿ ನೀಡಿದ ವೇಳೆ ಸಂಸದೆ ಸುಮಲತಾ ಅಂಬರೀಶ್‌ ಅವರು ಗೈರಾಗಿದ್ದಾರೆ.

ಕೇಂದ್ರ ಜಲಸಂಪನ್ಮೂಲ ಸ್ಥಾಯಿ ಸಮಿತಿಯ 17 ಸದಸ್ಯರ ಪೈಕಿ 14 ಜನರು ಕೆಆರ್‌ಎಸ್‌ಗೆ ಭೇಟಿ ನೀಡಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!