Mysore
32
scattered clouds

Social Media

ಬುಧವಾರ, 22 ಏಪ್ರಿಲ 2026
Light
Dark

ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ ; ಆರೋಪಿ ಬಂಧನ

ಬೆಂಗಳೂರು : ವಿಆರ್ ಗ್ರೂಪ್‌ನ ಸಂಸ್ಥಾಪಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೈಶಾಕ್ ಬಂಧಿತ ಆರೋಪಿ. ಈತ ಪತ್ರದ ಮೂಲಕ ಅರವಿಂದ್ ರೆಡ್ಡಿ ಅವರನ್ನು ಸ್ಯಾಂಡಲ್‌ವುಡ್ ನಟಿಯೊಬ್ಬರ ಜೊತೆಗಿನ ವಿವಾದವನ್ನು ಬಗೆಹರಿಸಿಕೊಳ್ಳುವಂತೆಯೂ, ಇಲ್ಲದಿದ್ದರೆ 6 ರಿಂದ 7 ಕೋಟಿ ರೂಪಾಯಿ ಹಣ ನೀಡಬೇಕೆಂದೂ ಆರೋಪಿ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬೆದರಿಕೆ ಪತ್ರವನ್ನು ಬ್ಲೂ ಡಾರ್ಟ್ ಕೊರಿಯರ್ ಮೂಲಕ ಕಳುಹಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ HAL ಪೊಲೀಸರು ಆರೋಪಿ ವೈಶಾಖ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡಳ ಸ್ನೇಹಿತ ಎಂದು ಹೇಳಲಾಗುತ್ತಿದೆ. ಜನವರಿ ತಿಂಗಳಲ್ಲಿ ಬೆದರಿಕೆ ಪತ್ರ ಬಂದ ಬಳಿಕ ಅರವಿಂದ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೇ ಅರವಿಂದ್ ರೆಡ್ಡಿ ಅವರ ಮೇಲೆ ಸ್ಯಾಂಡಲ್‌ವುಡ್ ನಟಿಯೊಬ್ಬರು ಲೈಂಗಿಕ ಕಿರುಕುಳ, ಹಿಂಬಾಲಿಸುವಿಕೆ ಹಾಗೂ ಬೆದರಿಕೆ ಆರೋಪಗಳನ್ನು ಮಾಡಿದ್ದರು. ಆ ಪ್ರಕರಣದಲ್ಲಿ ಅವರು ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈಗ ಇನ್ನೊಂದು ಬೆದರಿಕೆ ಪ್ರಕರಣದಲ್ಲಿ ಆರೋಪಿ ಬಂಧನವಾಗಿರುವುದು ಗಮನಾರ್ಹವಾಗಿದೆ.

 

Tags:
error: Content is protected !!