Mysore
23
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಬಿಪಿಎಲ್‌ ಕಾರ್ಡ್‌ ರದ್ದು: ಮೈತ್ರಿ ಪಕ್ಷಗಳ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್‌ ಕಿಡಿ

 

ಬೆಂಗಳೂರು: ಸರ್ಕಾರ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಮೈತ್ರಿ ಪಕ್ಷಗಳ ಆರೋಪದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ.

ನಗರದಲ್ಲಿ ಇಂದು(ನ.19) ಬಿಜೆಪಿ-ಜೆಡಿಎಸ್‌ ನಾಯಕರ ಆರೋಪಗಳ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೇ ರಾಜ್ಯಾದ್ಯಾಂತ ಬಿಪಿಎಲ್‌ ಕಾರ್ಡ್‌ ಕುರಿತು ಸರ್ವೆ ಮಾಡಲಾಗುತ್ತಿದೆ. ಬಳಿಕ ಅನರ್ಹರು ಹೊಂದಿರುವ ಬಿಪಿಎಲ್‌ ಕಾರ್ಡ್‌ನ್ನು ರದ್ದುಗೊಳಿಸಲಾಗುತ್ತದೆ ಅಷ್ಟೇ. ಇದರಿಂದ ಬಡವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಮಾತ್ರ ಈ ವಿಚಾರದಲ್ಲಿ ಮೊಸರಲ್ಲೂ ಕಲ್ಲು ಹುಡುಕುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈಗಾಗಲೇ ಬಿಪಿಎಲ್‌ ಕಾರ್ಡ್‌ನ್ನು ಹೊಂದಿರುವ ಕೆಲವು ಸರ್ಕಾರಿ ನೌಕರರು ಸಹ ರೇಷನ್‌ ಕಾರ್ಡ್‌ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಬಡವರು ಯಾರು ಎಂಬುದರ ಬಗ್ಗೆ ಸರ್ಕಾರ ಲಿಮಿಟೇಷನ್‌ ಮಾಡಿದ್ದು, ಕೆಲವರು ಜಿಎಸ್‌ಟಿ ಟ್ಯಾಕ್ಸ್‌ ಕಟ್ಟುತ್ತಿದ್ದಾರೆ. ಅದರಲ್ಲಿ ಬಡವರು ಸಹ ಇದ್ದು ಅವರಿಗೆ ಮತ್ತೊಮ್ಮೆ ರೇಷನ್‌ ಕಾರ್ಡ್‌ ನೀಡಲು ತೀರ್ಮಾನಿಸಿದ್ದೇವೆ. ಹೀಗಾಗಿ ಯಾವುದೇ ಬಡವರಿಗೂ ಅನ್ಯಾಯವಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಈಗ ಬಿಜೆಪಿ ನಾಯಕರಿಗೂ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಯಾವುದೇ ವಿಚಾರಗಳನ್ನು ಚರ್ಚಿಸಲು ಇಲ್ಲ. ಆ ವಿಚಾರವಾಗಿ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರದಿಂದ ಅಕ್ಕಿ ಕಾರ್ಯಕ್ರಮ, ಪೆನ್ಷನ್‌ ಕೊಡೊ ಕಾರ್ಯಕ್ರಮಗಳನ್ನು ಮಾಡಿದೆ. ಅಲ್ಲದೇ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಏನೇನು ಅನ್ಯಾಯ ಮಾಡಬೇಕೋ ಅಷ್ಟು ಅನ್ಯಾಯ ಮಾಡಿ ಒಂದು ಕಾರ್ಯಕ್ರಮಗಳನ್ನು ಸಹ ನೀಡಲಿಲ್ಲ. ಆಗಿನ ಕಾಲದಲ್ಲಿ ಅವರೆಲ್ಲರೂ ಯಾವುದೇ ಬಡವರಿಗೂ ಸಹಾಯ ಮಾಡಿಲ್ಲ. ಆದರೆ ಇದೀಗ ಮೈತ್ರಿ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Tags:
error: Content is protected !!