Mysore
31
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸಿಎಂ ಆಗುವ ಆಸೆ ಬಿಚ್ಚಿಟ್ಟ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಬಾಗಲಕೋಟೆ: ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಯಾಕಾಗಬಾರದು? ನನ್ನಲ್ಲಿ ಏನು ಕೊರತೆಯಿದೆ? ಪ್ರಾಮಾಣಿಕರನ್ನು ಸಿಎಂ ಮಾಡಬೇಕು ಅಂದರೆ ಮೊದಲು ನನ್ನ ಹೆಸರೇ ಬರುತ್ತೆ. ಒಳ್ಳೆಯ ಮನುಷ್ಯ ಸಿಎಂ ಆಗಬೇಕು ಎಂದು ದೇವರು ಆದೇಶ ಕೊಟ್ಟರೆ ನಾನೇ ಸಿಎಂ ಆಗುತ್ತೇನೆ. ಇಲ್ಲದಿದ್ದರೆ ನನ್ನ ಪಾಡಿಗೆ ನಾನು ಇರುತ್ತೇನೆ ಎಂದು ಹೇಳಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನನ್ನ ವಿರುದ್ಧ ಭ್ರಷ್ಟಾಚಾರ ಅಥವಾ ಏನಾದರೂ ಹಗರಣ ಇದ್ದಿದ್ದರೆ ನನ್ನನ್ನು ಬಿಡುತ್ತಿದ್ದರಾ? ಈ ಹಿಂದೆ ನನ್ನ ಮೇಲೂ ದಾಳಿ ಮಾಡಿಸಿದ್ದಾರೆ. ಗುಪ್ತಚರ ಇಲಾಖೆಯನ್ನು ಬಿಟ್ಟಿದ್ದರು. ಎಲ್ಲವನ್ನೂ ನೋಡಿದರೂ ಏನೂ ಆಗಲಿಲ್ಲ. ಅದಕ್ಕೆ ಸುಮ್ಮನೆ ಕೂತಿದ್ದಾರೆ ಅಷ್ಟೇ. ನನ್ನ ಮೇಲೆ ಆ ಭಗವಂತನ ಕೃಪೆಯಿದೆ. ಜನರ ಶಕ್ತಿಯಿದೆ ಎಂದರು.

ಇನ್ನು ಬೆಂಗಳೂರಿನಲ್ಲಿಂದು ನಡೆದ ಕೋರ್‌ ಕಮಿಟಿ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನ್ನನ್ನು ಯಾಕೆ ಕೋರ್‌ ಕಮಿಟಿ ಸಭೆಗೆ ಕರೆಯಬೇಕು. ನಾನು ಕೋರ್‌ ಕಮಿಟಿ ಮೆಂಬರ್‌ ಅಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದರು.

 

Tags: