Mysore
22
overcast clouds

Social Media

ಭಾನುವಾರ, 31 ಮೇ 2026
Light
Dark

ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಕುರಿತಂತೆ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ : ಅಮಿತ್‌ ಶಾ

ಹೊಸದಿಲ್ಲಿ: ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಕುರಿತಂತೆ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಗುವಾಹಟಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು “ಬಿಜೆಪಿಯ ನಿಲುವು ಸ್ಪಷ್ಟವಾಗಿದೆ ನಾವು ದೇಶದ ಮಾತೃ ಶಕ್ತಿಯ ಜೊತೆಗಿದ್ದೇವೆ.

ನಾನು ಕಾಂಗ್ರೆಸ್‌ ಬಳಿ ಕೇಳಲು ಬಯಸುತ್ತೇನೆ, ಅಲ್ಲಿ ಯಾರ ಸರ್ಕಾರವಿದೆ? ಅಲ್ಲಿರುವುದು ಕಾಂಗ್ರೆಸ್‌ ಸರ್ಕಾರ. ಅವರೇಕೆ ಇಲ್ಲಿಯ ತನಕ ಕ್ರಮಕೈಗೊಂಡಿಲ್ಲ? ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿರುವುದರಿಂದ ನಾವು ಕ್ರಮಕೈಗೊಳ್ಳಲು ಏನೂ ಇಲ್ಲ. ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು.

ನಾವು ತನಿಖೆಯ ಪರ ಇದ್ದೇವೆ ಹಾಗೂ ನಮ್ಮ ಮಿತ್ರ ಪಕ್ಷ ಜೆಡಿ(ಎಸ್)‌ ಕೂಡ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಇಂದು ಅವರ ಕೋರ್‌ ಸಮಿತಿ ಸಭೆಯಿದೆ ಮತ್ತು ಕ್ರಮಕೈಗೊಳ್ಳಲಾಗುವುದು,” ಎಂದು ಅವರು ಹೇಳಿದ್ದಾರೆ.

Tags:
error: Content is protected !!