Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸಿಎಂ ಖುರ್ಚಿಗಾಗಿ ನಿಮ್ಮ ವೀಡಿಯೋ ಸಹಾ ಬಿಡಬಹುದು: ರಾಜುಗೌಡ ಸ್ಫೋಟಕ ಹೇಳಿಕೆ!

ಯಾದಗಿರಿ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಸಿಎಂ ಖುರ್ಚಿ ಮೇಲೆ ಕಣ್ಣಿದ್ದು, ಅದನ್ನು ಪಡೆಯಲು ಡಿಕೆ ಅವರು ಏನು ಬೇಕಾದರೂ ಮಾಡಬಹುದು? ಲೋಕಸಭಾ ಚುನಾವಣೆ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಅಥವಾ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಸಿಡಿ ಬಿಡಬಹುದು ಎಂದು ಸೂರಪುರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ರಾಜುಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹುಣಸಗಿ ಪಟ್ಟಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿಎಂ ಖುರ್ಚಿ ಮೇಲೆ ಡಿಕೆಶಿಗೆ ಕಣ್ಣಿದೆ ಸಿಎಂ ಸಿದ್ದರಾಮಯ್ಯ ಅಣ್ಣನವರೆ ಹುಷಾರಾಗಿರಿ ಡಿಕೆ ಶಿವಕುಮಾರ್‌ ಅವರು ಸಿಡಿ ತಯಾರಿಸುವುದರಲ್ಲಿ ನಿಸ್ಸೀಮರು. ಇಂತವರನ್ನು ಪಕ್ಕದಲ್ಲಿಟ್ಟುಕೊಂಡು ಓಡಾಡಬೇಡಿ ಜಾರಕಿಹೋಳಿ ಸಿಡಿ ಅವರ ಮನೆಗೆ ಕಳುಹಿಸಿದ ಡಿಕೆ ಶಿವಕುಮಾರ್‌ ನಿಮಗೆ ಯಾವತ್ತೂ ಒಳ್ಳೆಯದನ್ನು ಮಾಡುವುದಿಲ್ಲ. ನಿಮ್ಮ ಖುರ್ಚಿ ಮೇಲೆ ಡಿಕೆ ಕಣ್ಣಿದ್ದು, ಅದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ದರಿದ್ದಾರೆ ಎಂದು ಎಚ್ಚರಿಸಿದರು.

ತಮ್ಮ ರಾಜಕೀಯ ಎದುರಾಳಿಗಳನ್ನು ಮುಗಿಸಲು ಡಿಕೆಶಿ ಪೆನ್‌ಡ್ರೈವ್‌ ಯೂನಿವರ್ಸಿಟಿ ತೆಗೆದಿದ್ದಾರೆ. ಯಾರನ್ನು ಹೇಗೆ ಬಗ್ಗು ಬಡಿಯಬೇಕು ಎಂಬ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಕೆಲವರಿಗೆ ಬೆದರಿಕೆ ಅಸ್ತ್ರ ಹೂಡಿದರೇ, ಮತ್ತೆ ಕೆಲವರಿಗೆ ಸಿಡಿ ಅಸ್ತ್ರ ಹೂಡುತ್ತಾರೆ. ಅಗತ್ಯಬಿದ್ದರೇ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿ ಅಸ್ತ್ರ ಬಳಸಲಿದ್ದಾರೆ ಎಂದು ಕಿಡಿಕಾರಿದರು.

ಪೆನ್‌ಡ್ರೈವ್‌ ವಿಚಾರದ ಬಗ್ಗೆ ಮೊದಲೇ ತಿಳಿದಿದ್ದ ಡಿಕೆಶಿ ಮತ್ಯಾಕೆ ವಿಚಾರ ಪ್ರಸ್ತಾಪಿಸಿಲ್ಲ. ಅವರಿಗೆ ಶಿಕ್ಷೆ ಕೊಡಿಸುವುದಕ್ಕಿಂತ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದೇ ಮುಖ್ಯವಾಗಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಆಕ್ರೋಶ ಹೊರಹಾಕಿದರು.

 

Tags: