Mysore
25
haze

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್‌ಗೆ ಕಾನೂನು ಸಂಕಷ್ಟ

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರ ವಿರುದ್ಧ ಭೂ ಒಡೆತನ ಯೋಜನೆಯಡಿ 60% ಕಮಿಷನ್ ಕೇಳಿದ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ.

ಭೋವಿ ಸಮಾಜ ಸೇವಾ ಸಂಘ ಮತ್ತು ಬಿಜೆಪಿಯ ಎಸ್‍ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ವೆಂಕಟೇಶ್ ಮೌರ್ಯ ಈ ದೂರನ್ನು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಲ್ಲಿಸಿದ್ದಾರೆ. ಇದರಿಂದಾಗಿ ರವಿಕುಮಾರ್‌ಗೆ ಕಾನೂನು ಸಂಕಷ್ಟ ಎದುರಾಗಿದೆ.

ಇದನ್ನು ಓದಿ:ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಮೇಲಿನ ಈ ಆರೋಪವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ರವಿಕುಮಾರ್ ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ, ಬಂಧನಕ್ಕೆ ಆಗ್ರಹಿಸಲಾಗಿದೆ. ಜೊತೆಗೆ, ಈ ಪ್ರಕರಣದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.

ಭೋವಿ ಅಭಿವೃದ್ಧಿ ನಿಗಮವು ಭೋವಿ ಸಮುದಾಯದ ಭೂ ರಹಿತ ಮಹಿಳೆಯರಿಗೆ ಭೂ ಒಡೆತನ ಯೋಜನೆಯಡಿ ಎರಡು ಎಕರೆ ಒಣ ಭೂಮಿ, ಒಂದು ಎಕರೆ ತೋಟದ ಭೂಮಿ, ಅಥವಾ ಅರ್ಧ ಎಕರೆ ತೇವ ಭೂಮಿಯನ್ನು ಖರೀದಿಸಲು 25 ಲಕ್ಷದವರೆಗೆ ಧನಸಹಾಯ (50% ಸಬ್ಸಿಡಿ, 50% ಸಾಲ) ಒದಗಿಸುತ್ತದೆ. ಆದರೆ, ಈ ಯೋಜನೆಯಡಿ ಫಲಾನುಭವಿಗಳಿಂದ 25 ಲಕ್ಷದಲ್ಲಿ 5 ಲಕ್ಷ ಕಮಿಷನ್‍ಗೆ ರವಿಕುಮಾರ್ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಸ್ಫೋಟಕ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಲಾಗಿದ್ದು, ಈ ವಿಡಿಯೋದಲ್ಲಿ ರವಿಕುಮಾರ್ ಮಧ್ಯವರ್ತಿಗಳ ಜೊತೆ 60% ಕಮಿಷನ್‍ಗೆ ಒತ್ತಾಯಿಸುವ ಸಂಭಾಷಣೆ ಇದೆ ಎಂದು ಆರೋಪಿಸಲಾಗಿದೆ.ಆರೋಪದ ಹಿನ್ನೆಲೆಯಲ್ಲಿ, ಭೋವಿ ಸಮಾಜ ಸೇವಾ ಸಂಘವು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದೆ.

Tags:
error: Content is protected !!