ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಭವಾನಿ ರೇವಣ್ಣ ಅವರಿಗೆ ಇಂದು(ಜೂ.7) ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ವಿಚಾರಣೆಗೆ ಹಾಜರಾಗಲೂ ಭವಾನಿ ರೇವಣ್ಣಗೆ ಸೂಚಿಸಿತ್ತು.
ಇದರ ಬೆನ್ನಲೇ ಭವಾನಿ ರೇವಣ್ಣ ಇಂದು (ಜೂ.7) ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದು, ತಮ್ಮ ವಕೀಲರೊಂದಿಗೆ ಎಸ್‌ಐಟಿ ಅಧಿಕಾರಿ ಹೇಮಂತ್ ಕುಮಾರ್ ಅವರ ಮುಂದೆ ಭಾವನಿ ರೇವಣ್ಣ ಹಾಜರಾಗಿದ್ದಾರೆ.
ನಗರದ ಸಿಐಡಿ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿಗಳು ಭವಾನಿ ರೇವಣ್ಣರನ್ನು ವಿಚಾರಣೆಗೆ ನಡೆಸುತ್ತಿದ್ದಾರೆ.