Mysore
33
scattered clouds

Social Media

ಗುರುವಾರ, 12 ಮಾರ್ಚ್ 2026
Light
Dark

ಬೆಂಗಳೂರು: ಕರೆಂಟ್‌ ಶಾಕ್‌ಗೆ ಮಹಿಳೆ ಬಲಿ

ಬೆಂಗಳೂರು: ನೀರು ಕುಡಿಯುವ ವೇಳೆ ಕರೆಂಟ್‌ ಶಾಕ್‌ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ ರಸ್ತೆಯ ಆನಂದಪುರದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಸೆಲ್ವಿ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ಅಲ್ಲಲ್ಲಿ ಮೋಟಾರ್‌ ಕನೆಕ್ಷನ್‌ ನೀಡಲಾಗಿದೆ. ಮೋಟಾರ್‌ ಸ್ಟಾರ್ಟ್‌ ಮಾಡುವಾಗ ಕರೆಂಠ್‌ ತಗುಲಿ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಬೆನ್ನಲ್ಲೆ ಸ್ಥಳಿಯರು ಮೈಸೂರು ರಸ್ತೆಯ ಎರಡೂ ಕಡೆ ಬಂದ್‌ ಮಾಡಿ ನ್ಯಾಯಕ್ಕಾಗಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ, ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಸಚಿವ ಜಮೀರ್‌ ಅಹ್ಮದ್‌ ಭೇಟಿ ನೀಡಿ ಮೃತ ಮಹಿಳೆ ಸೆಲ್ವಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ ಎನ್ನಲಾಗಿದೆ.

Tags:
error: Content is protected !!