Mysore
28
broken clouds

Social Media

ಸೋಮವಾರ, 17 ನವೆಂಬರ್ 2025
Light
Dark

ಬೆಂಗಳೂರಿನಲ್ಲಿ ಭಾರೀ ಮಳೆ; ನಾಳೆ ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಜನನಿಬಿಡ ಪ್ರಮುಖ ಪ್ರದೇಶಗಳೂ ಸಹ ಜಲಾವೃತವಾಗಿದ್ದು, ಇಂದೂ ( ಅಕ್ಟೋಬರ್‌ 22 ) ಸಹ ಮಳೆ ಅಬ್ಬರಿಸಿದೆ. ಇನ್ನು ಹವಾಮಾನ ಇಲಾಖೆಯ ಪ್ರಕಾರ ನಾಳೆಯೂ ಸಹ ಮಳೆ ಮುಂದುವರಿಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಜಗದೀಶ್‌ ನಾಳೆ ನಗರ ಹಾಗೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಎಂದು ಆದೇಶ ಹೊರಡಿಸಿದ್ದಾರೆ.

ನಗರದ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿಗೂ ರಜೆ ನೀಡುವಂತೆ ಆದೇಶಿಸಲಾಗಿದ್ದು, ಶನಿವಾರ ಅಥವಾ ಭಾನುವಾರ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.

ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ಇನ್ನುಳಿದಂತೆ ಎಲ್ಲಾ ಪಿಯು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮ, ಇಂಜಿನಿಯರಿಂಗ್‌ ಹಾಗೂ ಐಟಿಐ ಕಾಲೇಜುಗಳಿಗೆ ಯಾವುದೇ ರಜೆಯ ಆದೇಶವನ್ನು ಹೊರಡಿಸಿಲ್ಲ.

ಟಾಟಾ ನಗರ, ಯಲಹಂಕ ಜಲಾವೃತ: ಹೆಬ್ಬಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ಸಹಕಾರನಗರ ಹಾಗೂ ಟಾಟಾ ನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತ ಜಾಗಗಳಿಗೆ ಸಾಗಿಸುವ ಕಾರ್ಯ ಸಾಗಿದೆ. ಅತ್ತ ಯಲಹಂಕದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ವಾಹನಗಳು ನೀರಿನಲ್ಲಿ ತೇಲುವಷ್ಟು ನೀರು ಜನ ಪ್ರದೇಶಗಳಿಗೆ ನುಗ್ಗಿದೆ.

ನಿರ್ಮಾಣ ಹಂತದ ಕಟ್ಟಡ ಕುಸಿತ, ಮೂವರ ಸಾವು: ಇನ್ನು ಕಮ್ಮನಹಳ್ಳಿಯ ಬಾಬುಸಾಬ್‌ಪಾಳ್ಯದಲ್ಲಿ ನಿರ್ಮಾಣ ಹಂತದ ಬೃಹತ್‌ ಕಟ್ಟಡ ಕುಸಿತಗೊಂಡಿದ್ದು, ಕೆಲಸದಲ್ಲಿ ತೊಡಗಿದ್ದ 16 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಕೂಡಲೇ ರಕ್ಷಣಾ ಕಾರ್ಯ ಆರಂಭವಾಗಿದ್ದು, ಈ ಪೈಕಿ ಈಗಾಗಲೇ ಮೂವರು ದುರ್ಮರಣ ಹೊಂದಿದ್ದಾರೆ.

Tags:
error: Content is protected !!