Mysore
22
broken clouds

Social Media

ಶುಕ್ರವಾರ, 04 ಏಪ್ರಿಲ 2025
Light
Dark

ಒಂದು ಮುತ್ತಿಗೆ 50 ಸಾವಿರ ; ಖತರ್ನಾಕ್‌ ಶಿಕ್ಷಕಿ ಸೇರಿದಂತೆ ಹನಿಟ್ರ್ಯಾಪ್‌ ಗ್ಯಾಂಗ್‌ ಬಂಧನ

ಬೆಂಗಳೂರು : ಶಾಲಾ ಶಿಕ್ಷಕಿ ಬಳಸಿಕೊಂಡು ಉದ್ಯಮಿಗೆ ಹನಿಟ್ರ್ಯಾಪ್‌ ಮಾಡಿದ್ದ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಿಜಾಪುರ ರೌಡಿಶೀಟರ್‌ ಗಣೇಶ್‌ ಕಾಳೆ. ಸಾಗರ್‌ ಮೋರೆ ಹಾಗು ಶೃತಿ ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ವಿವರ: ಮಹಾಲಕ್ಷ್ಮಿ ಬಡಾವಣೆಯಲ್ಲಿ ಖಾಸಗಿ ಪ್ರೀಸ್ಕೂಲ್‌ ನಡೆಸುತ್ತಿದ್ದ ಆರೋಪಿ ಶೃತಿಗೆ 2023 ರಲ್ಲಿ ಉದ್ಯಮಿ ಪರಿಚಯವಾಗಿತ್ತು. ತನ್ನ ಮಕ್ಕಳನ್ನು ಈಕೆಯ ಪ್ಲೇಹೋಮ್‌ಗೆ ಕಳುಹಿಸುತ್ತಿದ್ದರು.

ಈ ವೇಳೆ ಸ್ನೇಹ ಬೆಳೆದು ಉದ್ಯಮಿಯಿಂದ ಶಾಲೆ ನಿರ್ವಹಣೆ ಸಲುವಾಗಿ ಆರೋಪಿ ಶಿಕ್ಷಕಿ 2 ಲಕ್ಷ ಸಾಲ ಪಡೆದಿದ್ದಳು. 2024ರಲ್ಲಿ ವಾಪಸ್‌‍ ಕೊಡುವುದಾಗಿ ತಿಳಿಸಿದ್ದಳು. ಹಣ ವಾಪಸ್‌‍ ಕೇಳಿದಾಗ ಶಾಲೆಯ ಪಾಲುದಾರಿಕೆ ಆಫರ್‌ ನೀಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದರು.
ಈ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದು, ಹಲವೆಡೆ ಸುತ್ತಾಟ ನಡೆಸಿದ್ದರು.

ಆರಂಭದಲ್ಲಿ ಮೋಹಕದಾಟದಲ್ಲಿ ಒಂದು ಮುತ್ತಿಗೆ 50 ಸಾವಿರ ರೂ.ಪಡೆದಿದ್ದು ನಂತರ ಹನಿಟ್ರ್ಯಾಪ್‌ ಸಂಚು ಶುರುವಾಗಿತ್ತು. ಶಿಕ್ಷಕಿ ಜೊತೆ ರೌಡಿ ಸೇರಿಕೊಂಡಿದ್ದ. ಇದರ ನಡುವೆ ಉದ್ಯಮಿ ಹೊಸ ಸಿಮ್‌ ಖರೀದಿಸಿ ಪರಸ್ಪರ ಮಾತುಕತೆ ಮುಂದುವರಿದಿತ್ತು. ಜನವರಿ ಮೊದಲ ವಾರದಲ್ಲಿ ಹಣ ವಾಪಸ್‌‍ ಕೇಳಿದಾಗ, ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಈ ವೇಳೆ ಲಿವಿಂಗ್‌ ಇನ್‌ ರಿಲೇಶನ್‌ಷಿಪ್‌ ವಿಚಾರ ಪ್ರಸ್ತಾಪ ಮಾಡಿದ್ದಳು.

ಈ ವೇಳೆ ಮತ್ತೆ ಹದಿನೈದು ಲಕ್ಷ ಪಡೆದು ನಂತರ ಪದೇ ಪದೇ ಹಣಕ್ಕೆ ಬೇಡಿಕೆ ಶುರು ಮಾಡಿದ್ದಳು. ನಂತರ ಉದ್ಯಮಿ ಸಿಮ್‌ ಮುರಿದು ಬಿಸಾಕಿ ಸಂಬಂಧ ಕಡಿತಕ್ಕೆ ಮುಂದಾಗಿದ್ದರು. ಆದರೆ ಮಾರ್ಚ್‌ 12 ರಂದು ಉದ್ಯಮಿ ಪತ್ನಿಗೆ ಆರೋಪಿ ಶಿಕ್ಷಕಿ ಕರೆ ಮಾಡಿದ್ದಳು. ಮಕ್ಕಳ ಸ್ಕೂಲ್‌ ಟಿಸಿ ಕೊಡ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಪ್ರೀಸ್ಕೂಲ್‌ಗೆ ಉದ್ಯಮಿ ತೆರಳಿದ್ದರು. ಪ್ರೀಸ್ಕೂಲ್‌ಗೆ ಬಂದಾಗ ಸಾಗರ್‌ ಮೋರೆ ಹಾಗೂ ಗಣೇಶ್‌ ಕಾಳೆ ಆರೋಪಿಗಳು ಇದ್ದರು.

ಸಾಗರ್‌ ಜೊತೆ ಶಿಕ್ಷಕಿಗೆ ಎಂಗೇಜೆಂಟ್‌ ಆಗಿದೆ. ಆದರೆ, ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ? ಈ ವಿಚಾರವನ್ನ ಆಕೆಯ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸ್ತೇನೆಂದು ಉದ್ಯಮಿಗೆ ಧಮಕಿ ಹಾಕಿ ಬ್ಲ್ಯಾಕ್‌ಮೇಲ್‌‍ ಮಾಡಲಾಗಿತ್ತು.

ಆಕೆಗೆ ಬಾಯ್‌ಫ್ರೆಂಡ್‌ ಇರುವ ವಿಚಾರ ತಿಳಿದಿಲ್ಲ. ಆಕೆ ಜೊತೆ ಊಟ ತಿಂಡಿ ಮಾಡಿದ್ದೇನಷ್ಟೇ ಎಂದು ಉದ್ಯಮಿ ಹೇಳಿದ್ದರು. ಮೊಬೈಲ್‌ನಲ್ಲಿ ಮುರಳಿ ಎಂಬಾತನ ಫೋಟೋ ತೋರಿಸಿದ್ದ ಗಣೇಶ್‌ ಹಾಗೂ ಸಾಗರ್‌ ಪೊಲೀಸ್‌‍ ಠಾಣೆಗೆ ಹೋಗೋಣ ಎಂದು ಕಾರಿನಲ್ಲಿ ಉದ್ಯಮಿಯನ್ನು ಕರೆದೊಯ್ದಿದ್ದರು.

ಮಹಾಲಕ್ಷ್ಮಿ ಲೇಔಟ್‌ನ ಉದ್ಯಮಿ ಮನೆ ಬಳಿಯೇ ಕರೆದೊಯ್ದು ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದರು. ನಿನ್ನ ಹೆಂಡತಿಗೆ ವಿಚಾರ ತಿಳಿಸಿ ಆಕೆಯನ್ನು ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಬಳಿಕ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಹಣದ ವ್ಯವಸ್ಥೆ ಮಾಡಬೇಕೆಂದು ಒತ್ತಡ ಹೇರಿ ಕೊನೆಗೆ 20 ಲಕ್ಷಕ್ಕೆ ಒಪ್ಪಂದವಾಗಿತ್ತು.

ನಂತರ 1.90 ಲಕ್ಷ ಹಣವನ್ನು ಪಡೆದು ನಂತರ ಆರೋಪಿಗಳು ಉದ್ಯಮಿಯನ್ನು ಬಿಟ್ಟುಕಳುಹಿಸಿದ್ದರು. ಆದರೆ ಮಾ.17 ರಂದು ಮತ್ತೆ ಉದ್ಯಮಿಗೆ ಆರೋಪಿ ಶಿಕ್ಷಕಿ ಕರೆ ಮಾಡಿ ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್‌ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ ಚಾಟಿಂಗ್‌ ಡಿಲೀಟ್‌ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡ್ತೀವೆಂದು ಬ್ಲ್ಯಾಕ್‌ಮೇಲ್‌‍ ಮಾಡಿದ್ದಳು.

ಕೊನೆಗೆ ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿ ಶಿಕ್ಷಕಿ, ಸಾಗರ್‌ ಮೋರೆ, ಗಣೇಶ್‌ ಕಾಳೆ ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಈ ವೇಳೆ ಗಣೇಶ್‌ ಕಾಳೆ ಬಿಜಾಪುರ ರೌಡಿಶೀಟರ್‌ ಆಗಿದ್ದು ಈತನ ಮೇಲೆ 9 ಪ್ರಕರಣಗಳು ಇರುವುದು ಪತ್ತೆ ಆಗಿದೆ. ಈ ತಂಡ ಇನ್ನು ಹಲವರಿಗೆ ಹನಿಟ್ರ್ಯಾಪ್‌ ಮಾಡಿರುವ ಸಾಧ್ಯತೆಗಳಿದ್ದು, ಸಚಿವರು ಹಾಗೂ ಪುತ್ರನ ಹನಿಟ್ರ್ಯಾಪ್‌ ಯತ್ನ ನಡುವೆಯೇ ನಗರದಲ್ಲಿ ಉದ್ಯಮಿಯೊಬ್ಬರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಹಿಂದೆ ಶಾಲಾ ಶಿಕ್ಷಕಿಯನ್ನು ಬಳಸಿಕೊಂಡಿರುವುದು ಭಾರೀ ಸಂಚಲನ ಮೂಡಿಸಿದೆ.

Tags: