Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಎಸ್‌ಪಿ ಕಚೇರಿಯನ್ನೇ ಮಾರಾಟ ಮಾಡಲು ಯತ್ನ; ಆರೋಪಿಗಳ ಬಂಧನ

ಬೆಂಗಳೂರು: ಖಾಲಿ ಸೈಟ್‌ಗಳ ನಕಲಿ ದಾಖಲೆ ಸೃಷ್ಠಸಿ ಭೂ ಕಬಳಿಕೆ ಮಾಡುತ್ತಿರುವ ಭೂಗಳ್ಳರು ಧೈರ್ಯ ಮಾಡಿ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಆಸ್ತಿಯನ್ನೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿ, ಪೊಲೀಸರ ಅತಿಥಿಯಾಗಿದ್ದಾರೆ.

ಹೌದು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿ(ಪೊಲೀಸ್‌ ವರಿಷ್ಠಾಧಿಕಾರಿ) ಕಚೇರಿಯ ಜಾಗದ ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡಲು ಮುಂದಾದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಹೃದಯಭಾಗದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ನೇಪಾಳ ರಾಜರ ಹೇಸರಿನಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಜಾಗದಲ್ಲಿ ಸಿವಿಲ್‌ ಡಿಸ್‌ಪ್ಯೂಟ್‌ ಕೂಡ ಇದೆ. ಈ ನಡುವೆ ಎಸ್‌ಪಿ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿಕೊಂಡು ಸದ್ದಿಲ್ಲದೇ ಮಾರಾಟ ಮಾಡಲು ಯತ್ನಿಸಿದ್ದಾರೆ.

ಜೂನ್‌ ೩ ರಂದು ಅನಧಿಕೃತವಾಗಿ ಎಸ್ಪಿ ಕಚೇರಿ ಪ್ರವೇಶಿಸಿದ ಹನೀಫ್‌ ಕಚೇರಿಯ ಫೋಟೊ ಹಾಗೂ ವಿಡಿಯೋಗಳನ್ನು ತೆಗೆದು ಗ್ರಾಹಕರಿಗೆ ಕಳುಹಿಸಿದ್ದಾರೆ. ಈ ವೇಳೆ ಕಚೇರಿಯಲ್ಲಿ ಇದ್ದ ಇನ್‌ ಸ್ಪೆಕ್ಟರ್ ಸಂತೋಷ ಪ್ರಶ್ನಿಸಿ ಯಾರು ನೀವು? ಹೊರಗೆ ಹೋಗಿ ವಿಡಿಯೋ ಮಾಡಿ ಎಂದಿದ್ದಾರೆ. ಈ ವೇಳೆ ಹನೀಫ್‌ ಈ ಜಾಗದ ದಾಖಲಾತಿಗಳು ನಮ್ಮ ಬಳಿ ಇವೆ. ಅಸಲಿಗೆ ಈ ಜಾಗ ಮೋಹನ್‌ಶೆಟ್ಟಿ ಹಾಗೂ ರಾಜಶೇಖರ್‌ ಅವರ ಹೆಸರಿನಲ್ಲಿದೆ. ಈ ಜಾಗದ ಜಿಪಿಎ ನನ್ನ ಹೆಸರಿಗೆ ಇದೆ ಎಂದು ಹೇಳಿದ್ದಾನೆ.

ಇದರಿಂದ ಆತಂಕಕ್ಕೆ ಒಳಗಾದ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂತೋಷ್‌ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಹಿರಿಯ ಅಧಿಕಾರಿಗಳು ಹನೀಫ್‌ ಸೇರಿದಂತೆ ನಕಲಿ ದಾಖಲೆ ಸೃಷ್ಠಿಸಿದ ರಾಜಶೇಜರ್‌, ಮೊಹಮದ್‌ ನದೀಮ್‌, ಗಣಪತಿ ಹಾಗೂ ಮೋಹನ್‌ ಶೆಟ್ಟಿ ಎಂಬುವವರ ಮೇಲೆ ದೂರು ದಾಖಲಿಸಿ, ಮೂವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Tags: