Mysore
25
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಎಣ್ಣೆ ಪ್ರಿಯರಿಗೆ ಶಾಕ್‌ ; ಮತ್ತೆ ಬಿಯರ್‌ ಬೆಲೆ ಏರಿಕೆ

Beer price increase

ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಆಗಾಗ ಮದ್ಯದ ಬೆಲೆ ಏರಿಕೆ ಮಾಡುತ್ತಾ, ಮದ್ಯಪ್ರಿಯರಿಗೆ ಶಾಕ್ ನೀಡುತ್ತಾ ಬಂದಿರುವ ರಾಜ್ಯ ಸರ್ಕಾರ ಇದೀಗ ಮತ್ತೇ ಬಿಯರ್ ಬೆಲೆ ಏರಿಕೆ ಮಾಡಿದೆ.

ಸದ್ಯ ಕಳೆದ ಎರಡು ವರ್ಷದಲ್ಲಿ ನಾಲ್ಕನೇ ಬಾರಿ ಬಿಯರ್ ದರ ಏರಿಕೆ ಮಾಡಲಾಗಿದೆ. ಐಎಂಎಲ್ ಮೊದಲ ಮೂರು ಸ್ಟ್ರಾಬ್‌ಗಳಿಗೆ (180 ಮಿ.ಲೀ) 15 ರೂಪಾಯಿ ಹಾಗೂ ನಾಲ್ಕನೇ ಸ್ಟ್ರಾಬ್‌ಗೆ 5 ರೂಪಾಯಿ ಏರಿಕೆ ಮಾಡಲಾಗಿದೆ.

2025ರ ಆರಂಭದಲ್ಲಿಯೇ ದೇಸೀಯ ಮದ್ಯ (ಐಎಂಎಲ್) ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸಿತ್ತು. ಇದೀಗ ರಾಜ್ಯ ಸರ್ಕಾರವು ಮತ್ತೆ ಎಇಡಿ ಏರಿಕೆ ಮಾಡಿದೆ. ಪರಿಷ್ಕೃತ ದರವು ಮೇ 15 ರಿಂದಲೇ (ಇಂದಿನಿಂದ) ಜಾರಿಯಾಗಿದೆ.

ರಾಜ್ಯ ಸರ್ಕಾರವು ಶೇ.5ರಷ್ಟು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಿದ ಬಳಿಕ ಈ ಬೆಲೆ ಏರಿಕೆ ಜಾರಿಯಾಗಿದೆ. ಬಿಯರ್ ಮೇಲಿನ AED ಅನ್ನು 195% ರಿಂದ 200%ಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿ ಸೂಚನೆಯಲ್ಲಿ ತಿಳಿಸಲಾಗಿದೆ. ಸರ್ಕಾರವು AED ಅನ್ನು ಶೇ.10 ರಷ್ಟು ಹೆಚ್ಚಿಸಲು ಯೋಜಿಸಿತ್ತು. ಆದರೆ ಫೆಡರೇಶನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಕರ್ನಾಟಕ ಮದ್ಯದ ಬೆಲೆಗಳಲ್ಲಿ ಪದೇ ಪದೆ ತೀವ್ರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿದ್ದರಿಂದ ಅದನ್ನು ಶೇ.10 ಬದಲಿಗೆ ಶೇ.5ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.

ಈಗ ಎಇಡಿ ಏರಿಕೆಯೊಂದಿಗೆ ಪ್ರೀಮಿಯಂ ಅಥವಾ ಇತರೆ ಬಿಯರ್ ಬ್ರಾಂಡ್‌ ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವ ಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 10 ರಿಂದ 15 ರೂಪಾಯಿ ಏರಿಕೆ ಆಗಬಹು ದೆಂದು ನಿರೀಕ್ಷಿಸಲಾಗಿದೆ. ಪ್ರೀಮಿಯಂ ಬ್ರಾಂಡ್‌ಗಳ ಬಿಯ‌ರ್ ದರವು ಬಾಟಲಿಗೆ 10 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ

ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬ್ರಾಂಡ್‌ಗಳ ಬಿಯರ್ ದರ 5 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಯಿದೆ. ಬೆಲೆ ಏರಿಕೆಯು ಬ್ರಾಂಡ್‌ನಿಂದ ಬ್ರಾಂಡ್‌ಗೆ ವ್ಯತ್ಯಾಸವಾಗಲಿದೆ. ಆಲೋ ಜಾರಿ ಪ್ರಮಾಣ ಹೆಚ್ಚಿರುವ ಬ್ರಾಂಡ್ ಗಳ ಬಿಯರ್ ಬೆಲೆಯು ಗಣನೀಯವಾಗಿ ಏರಿಕೆಯಾಗಲಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.

Tags:
error: Content is protected !!