Mysore
18
overcast clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಶವರ್ಮಾದಲ್ಲೂ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ , ಬ್ಯಾನ್ ಗೆ ಚಿಂತನೆ

ಬೆಂಗಳೂರು : ಇತ್ತೀಚೆಗೆ ಆಹಾರ ಮತ್ತು ಗುಣಮಟ್ಟ ಇಲಾಖೆಯೂ ನಡೆಸಿದ  ಪರೀಕ್ಷೆಯಲ್ಲಿ ಗೋಬಿ, ಕಬಾಬ್‌ , ಪಾನಿಪುರಿಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳು ಪತ್ತೆಯಾಗಿದ್ದವು. ಬಳಿಕ ಇಲಾಖೆಯು ಗೋಬಿ, ಕಬಾಬ್‌ , ಕಾಟನ್‌ ಕ್ಯಾಂಡಿ ತಯಾರಿಕೆಯಲ್ಲಿ ಬಳಸುವ ಕೃತಕ ಬಣ್ಣಗಳನ್ನಬ್ಯಾನ್‌ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಈ ಪಟ್ಟಿಯಲ್ಲಿ ಶವರ್ಮಾ ಕೂಡ ಸೇರ್ಪಡೆಗೊಳ್ಳುತ್ತಿದೆ. ಗೋಬಿ, ಕಬಾಬ್‌ ಕಾಟನ್‌ ಕ್ಯಾಂಡಿ ಬಳಿಕ ಶವರ್ಮಾ ಬ್ಯಾನ್‌ ಮಾಡಲು ಚಿಂತನೆ ನಡೆದಿದೆ.

ಆಹಾರ ಮತ್ತು ಗುಣಮಟ್ಟ ಇಲಾಖೆಯೂ ರಾಜ್ಯದ ವಿವಿಧೆಡೆಯಿಂದ ತಂದ ೧೭ ಶವರ್ಮಾ ಮಾದರಿ ಪರೀಕ್ಷೆ ನಡೆಸಲಾಗಿದ್ದು ಈ ೧೭ ರ ಪೈಕಿ ೮  ಮಾದರಿಯಲ್ಲಿ ಬ್ಯಾಕ್ಟೀರಿಯಾ ಈಸ್ಟ್‌ ಪತ್ತೆಯಾಗಿದೆ. ಸರಿಯಾದ ರೀತಿಯಲ್ಲಿ ಆಹಾರ ತಯಾರಿಸದ ಕಾರಣ ಬ್ಯಾಕ್ಟೀರಿಯಾಗಳು ಪತ್ತೆಯಾಗಿದೆ. ಈಗಾಗಲೇ ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿಗಳ ವಿರುದ್ಧ ಇಲಾಖೆ ಸೂಕ್ತವಾದ ಕ್ರಮಕೈಗೊಂಡಿದೆ. ಎಲ್ಲಾ ಶವರ್ಮಾ ಮಾರಾಟಗಾರರಿಗೆ ಏಫ್‌ ಎಸ್‌ ಎಸ್‌ ಎಐ ನೋಂದಣಿ ಮಾಡುವುದು ಕಡ್ಡಾಯಗೊಳಿಸಲಾಗಿದೆ. ನೋಂದಣಿ ಪತ್ರ ಪ್ರದರ್ಶನ ಮಾಡದಿದ್ರೆ ಮಾರಾಟಕ್ಕೆ ಬ್ಯಾನ್‌ ಮಾಡುವ ಎಚ್ಚರಿಕೆಯನ್ನ ನೀಡಲಾಗಿದೆ.  ಅಲ್ಲದೆ ಶವರ್ಮಾ ತಯಾರಿಕೆಯ ವೇಳೆ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದ್ದು, ಶುಚಿತ್ವ ನಿರ್ವಹಣೆ ಹಾಗೂ ನೋಂದಣಿ ಮಾಡಿಸದಿದ್ರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.

Tags:
error: Content is protected !!