Mysore
25
overcast clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಈ ಬಾರಿಯ ಬಜೆಟ್‌ ರಾಜ್ಯ ಬಜೆಟ್‌ ರೈತರ ಪರವಾಗಿರಲಿ: ಬಿ.ವೈ.ವಿಜಯೇಂದ್ರ

ಮಂಡ್ಯ: ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಮಂಡನೆ ಮಾಡಲಿರುವ ಬಜೆಟ್‌ ರೈತರ ಪರವಾಗಿ ಬಜೆಟ್‌ ಮಂಡನೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಕೊತ್ತತ್ತಿ ಗ್ರಾಮದ ಜಮೀನಿನಲ್ಲಿ ಇಂದು(ಮಾರ್ಚ್‌.4) ಭತ್ತ ನಾಟಿದ ಬಳಿಕ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ರೈತಪರ ಅಭಿವೃದ್ಧಿ ಕಾರ್ಯಗಳಾಗಲಿ ಅಥವಾ ತೀರ್ಮಾನಗಳನ್ನು ಮಾಡಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಉತ್ತಮ ಬುದ್ಧಿಯನ್ನು ತಾಯಿ ಚಾಮುಂಡೇಶ್ವರಿ ದೇವಿ ಕರುಣಿಸಲಿ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನತೆಗೆ ಒಂದು ಕಡೆ ಗ್ಯಾರಂಟಿ ನೀಡುವುದಾಗಿ ಹೇಳುತ್ತಾರೆ. ಇನ್ನೊಂದು ಕಡೆ ಕಿತ್ತುಕೊಳ್ಳುವ ಕೆಲಸ ನಡೆಸುತ್ತಿದ್ದಾರೆ. ಇದು ಬಡವರ ವಿರೋಧಿ ಸರ್ಕಾರವಾಗಿದೆ. ಅಲ್ಲದೇ ಈ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಈ ಬಾರಿ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಮ್ಮ ಇಜೆಪಿ ಪಕ್ಷ ಭಷ್ಟ್ರ ಕಾಂಗ್ರೆಸ್‌ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಿದೆ. ಜೊತೆಗೆ ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಮತ್ತು ನಿಜ ಬಣ್ಣವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡಲಿದ್ದೇವೆ ಎಂದರು.

Tags:
error: Content is protected !!