Mysore
19
overcast clouds
Light
Dark

ಶಾಲಾ ಮಕ್ಕಳಿಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಣೆ ; ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಶಾಲಾ ಮಕ್ಕಳಿಗೆ ಅಜೀಮ್‌ ಪ್ರೇಮ್‌ ಜೀ ಪ್ರತಿಷ್ಠಾನದಿಂದ ವಾರದಲ್ಲಿ ೪ ಸಲ ಮೊಟ್ಟೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅಜೀಮ್‌ ಪ್ರೇಮ್‌ ಜೀ ಪ್ರತಿಷ್ಠಾನವು ಮೊಟ್ಟೆ ಒದಗಿಸಲಿದೆ. ವಾರದಲ್ಲಿ ೪ ದಿನಗಳ ಕಾಲ ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ಒಂದು ಮೊಟ್ಟೆ ವಿತರಿಸಲಿದೆ ಎಂದು ತಿಳಿಸಿದರು.

ಅಲ್ಲದೆ ಮೊಟ್ಟೆ ವಿತರಿಸುವ ಯೋಜನೆ ಎಂದಿನಿಂದ ಆರಂಭವಾಗಲಿದೆ ಅಂತ ಬಹಿರಂಗ ಪಡಿಸಲಿಲ್ಲ. ಅಜೀಮ್‌ ಪ್ರೇಮ್‌ ಜಿ ಹೇಳಿದ್ದಾರೆಂದರೆ ಅದು ಬೇಗ ಶುರುವಾಗುವುದರಲ್ಲಿ ಅನುಮಾನವಿಲ್ಲ. ಇದು ನಿಜಕ್ಕೂ ಬಹುದೊಡ್ಡ ಕೊಡುಗೆ ಅನಿಸಲಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಲಕ್ಷಾಂತರ ಮಕ್ಕಳು ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ವಾರದಲ್ಲಿ ೪ ಮೊಟ್ಟೆ ನಿಸ್ಸಂದೇಹವಾಗಿ ಅವರ ದೇಹಕ್ಕೆ ಬೇಕಿರುವ ಪೌಷ್ಠಿಕಾಂಶ ಒದಗಿಸಲಿದೆ ಎಂದು ಹೇಳಿದರು.