ಬೆಂಗಳೂರು: ವಿಜಯಪುರದ ಎಪಿಎಂಸಿ ವ್ಯಾಪ್ತಿಯಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರ ಹಲ್ಲೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಇಂದು (ಜ.20) ಮಾಧ್ಯಮದವರ ಪ್ರಶ್ನೆ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ಘಟನೆ ಅಮಾನೀಯವಾದದ್ದು. ಈ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠರ ಜೊತೆ ಮಾತನಾಡಿ ಸೂಕ್ತ ಕ್ರಮ ಜರುಗಿಸಲು ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಬ್ಬ ಆಚರಣೆ ಮುಗಿಸಿ ಮೂವರು ಕಾರ್ಮಿಕರು ಕೆಲಸಕ್ಕೆ ತಡವಾಗಿ ಬಂದ ಕಾರಣಕ್ಕೆ ಮಾಲೀಕನು ಗಾಂಧಿನಗರದ ಸ್ಟಾರ್‌ಚೌಕ್ ಬಳಿಯಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ರಾಡ್‌ನಿಂದ ಅಮಾನುಷವಾಗಿ ಥಳಿಸಿರುವ ವಿಡೀಯೊ ವೈರಲ್ ಹಾಗಿತ್ತು. ಈ ಘಟನೆ ತೀವ್ರವಾಗಿ ಕಳವಳ ಉಂಟುಮಾಡಿದೆ ಎಂದು ತಿಳಿಸಿದರು.