ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ 50 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಸಿನಿಮಾ ರಿ-ರಿಲೀಸ್ ಆಗಿದ್ದು, ಅಭಿಮಾನಿಗಳೊಂದಿಗೆ ಸೇರಿ ತನ್ನದೇ ಚಿತ್ರವನ್ನು ಕ್ರೇಜಿಕ್ವಿನ್ ರಕ್ಷಿತಾ ವೀಕ್ಷಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬ ಮಾರ್ಚ್.17 ರಂದು ಇದೆ. ಈ ಹಿನ್ನೆಲೆಯಲ್ಲಿ ಅಪ್ಪು ಚಿತ್ರತಂಡ ಪುನೀತ್ ರಾಜ್‌ಕುಮಾರ್ ಹಾಗೂ ರಕ್ಷಿತಾ ನಟನೆಯ ಅಪ್ಪು ಚಿತ್ರವನ್ನು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಇಂದು(ಮಾರ್ಚ್.14) ಅಪ್ಪು ಸಿನಿಮಾವನ್ನು ರಿ-ರಿಲೀಸ್ ಮಾಡಿದೆ. ಹೀಗಾಗಿ ಅಭಿಮಾನಿಗಳೊಂದಿಗೆ ರಕ್ಷಿತಾ ಅಪ್ಪು ಚಿತ್ರವನ್ನು ವೀಕ್ಷಿಸಿ ರಂಜಿಸಿದ್ದಾರೆ. ಈ ಸಂದರ್ಭದಲ್ಲಿ ಅರಸು ಮತ್ತು ಆಕಾಶ್ ಚಿತ್ರಗಳ ನಿರ್ದೇಶಕ ಮಹೇಶ್ ಬಾಬು ಸಹ ಸಾಥ್ ನೀಡಿದ್ದಾರೆ.
ಇನ್ನು ಈ ವೇಳೆ ಬಿಗ್ ಬಾಸ್-10ರ ವಿಜೇತ ಕಾರ್ತಿಕ್ ಮಹೇಶ್, ಸ್ಪರ್ಧಿಗಳಾದ ಕಿಶನ್, ರಕ್ಷಕ್ ಬುಲೆಟ್ ಹಾಗೂ ನಮ್ರತಾ ಗೌಡ ಸಹ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್ ಕುಮಾರ್ ಹಾಗೂ ನಟಿ ರಕ್ಷಿತಾ ಅವರು 2002ರಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ ಅಪ್ಪು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.