Mysore
25
overcast clouds

Social Media

ಮಂಗಳವಾರ, 15 ಸೆಪ್ಟೆಂಬರ್ 2026
Light
Dark

ಆರ್‌ಸಿಬಿ ಹಾಗೂ ಕೆಎಸ್‌ಸಿಎಗೆ ಮತ್ತೊಂದು ಶಾಕ್:‌ ಹೈಕೋರ್ಟ್‌ ಮೆಟ್ಟಿಲೇರಿದ ಕಬ್ಬನ್‌ ಪಾರ್ಕ್‌ ಅಸೋಸಿಯೇಷನ್‌

ಬೆಂಗಳೂರು: ಆರ್‌ಸಿಬಿ ಹಾಗೂ ಕೆಎಸ್‌ಸಿಎಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕಬ್ಬನ್‌ ಪಾರ್ಕ್‌ನಲ್ಲಿ ನೂರಾರು ಮರಗಳಿಗೆ ಹಾನಿಯಾಗಿದೆ ಎಂದು ಕಬ್ಬನ್‌ ಪಾರ್ಕ್‌ ಅಸೋಸಿಯೇಷನ್‌ ಹೈಕೋರ್ಟ್‌ ಮೆಟ್ಟಿಲೇರಿದೆ.

ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳು, ಜನರು ಕಬ್ಬನ್‌ ಪಾರ್ಕ್‌ನಲ್ಲಿದ್ದ ಮರಗಳ ಮೇಲೆ ಹತ್ತಿ ನೆಚ್ಚಿನ ಆಟಗಾರರನ್ನು ನೋಡಲು ಮುಂದಾಗಿದ್ದರು. ಈ ವೇಳೆ ನೂರಾರು ಮರಗಳು, ಸಸಿಗಳು ಹಾನಿಯಾಗಿದೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಕಬ್ಬನ್‌ ಪಾರ್ಕ್‌ ಅಸೋಸಿಯೇಷನ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಬಲಿಯಾಗಿದ್ದರು. ಇದೇ ವೇಳೆ ಕಬ್ಬನ್‌ ಪಾರ್ಕ್ ಮರಗಳಿಗೂ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ನಷ್ಟವನ್ನು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಭರಿಸಬೇಕು ಎಂದು ಕಬ್ಬನ್‌ ಪಾರ್ಕ್‌ ಅಸೋಸಿಯೇಷನ್‌ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದೆ.

Tags:
error: Content is protected !!