Mysore
22
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

alcohol: ಸ್ಟ್ರಾಂಗ್ ʻಬಿಯರ್‌ʼ ದರ ಏರಿಕೆಗೆ ಚಿಂತನೆ

ಬೆಂಗಳೂರು: ರಾಜ್ಯ ಸರ್ಕಾರವು ಸ್ಟ್ರಾಂಗ್ ಬಿಯರ್ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಲು ಸಿದ್ಧವಾಗಿರುವುದರಿಂದ ಬಿಯರ್‌ ಕುಡಿಯುವವರು ತಮ್ಮ ನೆಚ್ಚಿನ ಪಾನೀಯಕ್ಕೆ ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.

ತೆರಿಗೆಗೆ ಪ್ರಸ್ತಾವನೆ ಜಾರಿಯಾದರೆ, ಕೇವಲ ಒಂದು ವರ್ಷಕ್ಕೆ ರಾಜ್ಯದಲ್ಲಿ ಬಿಯರ್‌ ಬೆಲೆ ಮೂರನೇ ಬಾರಿ ಹೆಚ್ಚಳವಾದಂತಗಲಿದೆ. ಈ ಮೂಲಕ ಬಿಯರ್ ಕುಡಿಯುವವರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಶೇ.5 ಮತ್ತು ಶೇ6.5ರ ನಡುವಿನ ಆಲ್ಕೋಹಾಲ್ ಅಂಶ ಹೊಂದಿರುವ ಬಿಯರ್ಗಳ ಮೇಲೆ ಪ್ರತಿ ಬೃಹತ್ ಲೀಟರ್ಗೆ 16 ರೂ. ಸುಂಕವನ್ನು ಪ್ರಸ್ತಾಪಿಸಲಾಗಿದೆ. ಶೇ.5ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್ಗಳ ಮೇಲೆ ಪ್ರತಿ ಬಲ್ಕ್ ಲೀಟರ್ಗೆ 10 ರೂ. ಸುಂಕ ಹೆಚ್ಚಳ ಮಾಡುವ ಪ್ರಸ್ತಾಪವಿದೆ. ಈ ನೂತನ ಪರಿಷ್ಕರಣ ದರವು ಅಕ್ಟೋಬರ್ 1ರಿಂದಲೇ ಜಾರಿಯಾಗಲಿದೆ ಎಂದು ವರದಿಯಾಗಿದೆ.

ಸ್ಟ್ರಾಂಗ್ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡುವಂತೆ ಅಬಕಾರಿ ಇಲಾಖೆ ಸಿಎಂ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹೀಗಾಗಿ, ಶೀಘ್ರದಲ್ಲೇ ಅಬಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಿಎಂ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಸ್ಟ್ರಾಂಗ್ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ.

Tags:
error: Content is protected !!