Mysore
25
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ತಾಂತ್ರಿಕ ದೋಷದಿಂದ ಬೆಂಗಳೂರಿಗೆ ವಾಪಾಸ್‌ ಆದ ಏರ್‌ ಇಂಡಿಯಾ ವಿಮಾನ

ಬೆಂಗಳೂರು: ಇಲ್ಲಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶಾಖಪಟ್ಟಣಕ್ಕೆ ಹೋಗಬೇಕಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಮರಳಿ ಬೆಂಗಳೂರು ನಿಲ್ದಾಣಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶಾಖಪಟ್ಟಣದತ್ತ ಹಾರಿದ್ದ ಏರ್‌ ಇಂಡಿಯಾ ವಿಮಾನವೂ ತಾಂತ್ರಿಕ ದೋಷದಿಂದ ಇಂದು(ಜನವರಿ.25) ಬೆಳಿಗ್ಗೆ 10 ಗಂಟೆಗೆ ಟೇಕ್‌ ಆಫ್‌ ಆಗಿದೆ. ಆದರೆ ವಿಮಾನದ ಕೆಲವು ತಾಂತ್ರಿಕ ಸಮಸ್ಯೆಯಿಂದ ಹಲವು ಕಾಲ ಬೆಂಗಳೂರಿನ ಸುತ್ತಲು ತಿರುಗಿದ ಬಳಿಕ ನಿಲ್ದಾಣದಲ್ಲಿ ಟೇಕ್‌ ಆಫ್‌ ಆಗಿದೆ.

ಇನ್ನೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷದ ಸಮಸ್ಯೆಯಿದ್ದರೂ ಯಾವುದೇ ರೀತಿಯ ತುರ್ತು ಭೂಸ್ಪರ್ಶವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿಮಾನಯಾನ ಸಂಸ್ಥೆಯಿಂದ ಯಾವ ರೀತಿಯ ತಾಂತ್ರಿಕ ಸಮಸ್ಯೆ ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

Tags: