Mysore
20
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ರವಿ ಬಂಧನದ ಬಳಿಕ ರಾತ್ರಿಯಿಡೀ 500 ಕಿ.ಮೀ ಸುತ್ತಾಡಿಸಿದ ಪೊಲೀಸರು..!

ಬೆಳಗಾವಿ: ಜನಪ್ರತಿನಿಧಿ ಆಗಿರುವ ಸಿ.ಟಿ.ರವಿ ಬಂಧಿಸಿದ ಮೇಲೆ, ಸುರಕ್ಷತೆಗೆ ದೃಷ್ಟಿಯಿಂದ ಅವರನ್ನು ರಾತ್ರಿಯಿಡಿ ಪೊಲೀಸ್‌ ವಾಹನದಲ್ಲಿ ಸುತ್ತಾಡಿಸಬೇಕಾಯಿತು ಎಂದು ನಗರ ಪೊಲೀಸ್‌ ಕಮಿಷರನ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

ಬಂಧನವಾದ ಮೇಲೆ ಬಹಳಷ್ಟು ಬೆಂಬಲಿಗರು, ಜನರು ಗುಂಪಾಗಿ ಸೇರತೊಡಗಿದರು. ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಲಾಯಿತು. ಅಲ್ಲಿಯೂ ಗೊಂದಲಯ ವಾತಾವರಣ ಮೂಡಬಾರದು ಎಂದು ವಾಹನದಲ್ಲಿ ಸಂಚಾರ ಮಾಡಿಸಲಾಯಿತು.

ಸುರ್ವಣ ವಿಧಾನಸೌಧದಿಂದ ಹಿರೇಬಾಗೇವಾಡಿ ಠಾಣೆ, ಅಲ್ಲಿಂದ ಖಾನಾಪುರ, ಬಳಿಕ ನಂದಗಡ ಠಾಣೆ, ಚನ್ನಮ್ಮನ ಕಿತ್ತೂರು, ದೊಡ್ಡವಾಡಿ, ಬೆಳವಡಿ, ಸವದತ್ತಿ, ಯರಗಟ್ಟಿ, ರಾಮದುರ್ಗ, ಗೋಕಾಕ ತಾಲೊಕಿನ ಅಂಕಲಗಿ ಸುತ್ತುವರಿದು ಮರಳಿ ಬೆಳಗಾವಿ ತಾಲೂಕಿನ ಮುತಗಾ ಗ್ರಾಮಗಳ ಮಾರ್ಗವಾಗಿ ಅವರನ್ನು ಸುತ್ತಾಡಿಸಲಾಯಿತು.

ಯರವಟ್ಟಿ ಢಾಬಾದಲ್ಲಿ ಉಪಾಹಾರ ನೀಡಿದರು. ನಸುಕಿನ 3.30ಕ್ಕೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ತಲೆಗೆ ಚಿಕಿತ್ಸೆ ಕೊಡಿಸಿದರು. ಬಳಿಕ ಆರೋಗ್ಯ ಪರೀಕ್ಷೆ ನಡೆಸಿದ ನ್ಯಾಯಾಲಯಕ್ಕೆ ಕರೆತರಲಾಯಿತು.

ಬಂಧನದ ಬಳಿಕ ರಾತ್ರಿಯಿಡೀ 500 ಕಿ.ಮೀ ಸುತ್ತಾಡಿಸಿದ್ದಾರೆ. ಮೂರು ಜಿಲ್ಲೆಗೆ ತಿರುಗಿಸಿದ್ದಾರೆ. ಒಂದಕ್ಕೆ ಹೋಗುವುದಕ್ಕೂ ಬಿಟ್ಟಿಲ್ಲ. ರಾಮದುರ್ಗ ಬಳಿ ಮೂತ್ರವಿಸರ್ಜನೆಗೆ ವಾಹನ ಬಿಟ್ಟು ಇಳಿದಾಗ ಪೊಲೀಸರು ಕ್ರಮಕ್ಕೆ ಅವರು ಚೀರಾಡಿದ್ದಾರೆ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದರು.

Tags: